ಬೆಂಗಳೂರು, ಆ 08 (DaijiworldNews/PY): "ನನ್ನ ಬೇಡಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ" ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬೊಮ್ಮಾಯಿ ಅವರಿಗೆ ನನ್ನ ಬೇಡಿಕೆ ಬಗ್ಗೆ ತಿಳಿಸಿದ್ದೇನೆ. ಯಡಿಯೂರಪ್ಪ ಅವರಿ ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ. ಆದರೆ, ಈಗ ಯಡಿಯೂರಪ್ಪ ಅವರು ಸಿಎಂ ಅಲ್ಲ. ಪರಿಸ್ಥಿತಿ ಬದಲಾಗಿದೆ. ಹಾಗಾಗಿ ನನ್ನ ಬೇಡಿಕೆಯನ್ನು ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ" ಎಂದಿದ್ದಾರೆ.
"ನನ್ನ ಬೇಡಿಕೆ ಬಗ್ಗೆ ನಾನು ಬಹಿರಂಗವಾದ ಹೇಳಿಕೆ ನೀಡುವುದಿಲ್ಲ. ಸಿಎಂ ಅವರು ಕೈಗೊಳ್ಳುವ ತೀರ್ಮಾನದ ಮೇಲೆ ನನ್ನ ಮುಂದಿನ ನಡೆ ನಿರ್ಧರಿತವಾಗುತ್ತದೆ" ಎಂದು ತಿಳಿಸಿದ್ದಾರೆ.
"ಸಿಎಂ ಸ್ಥಾನ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ ಎನ್ನುವುದು ನನಗೂ ತಿಳಿದಿದೆ. ಒಬ್ಬೊಬ್ಬರದ್ದು ಒಂದೊಂದು ಬೇಡಿಕೆ ಇರುತ್ತೆ. ಸಿಎಂ ಅವರಿಗೆ ಒತ್ತಡ ಇದೆ ಎನ್ನುವ ಬಗ್ಗೆ ನನಗೆ ಅರಿವಿದೆ. ನಾಯಕತ್ವ ಬದಲಾವಣೆಯಾದ ಕಾರಣದಿಂದ ನಾವು ಕೂಡಾ ಬದಲಾವಣೆ ಬಯಸಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸಿಎಂ ಬಳಿ ಹೇಳಿದ್ದು, ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ" ಎಂದಿದ್ದಾರೆ.