ನವದೆಹಲಿ, ಆ.08 (DaijiworldNews/HR): ದೆಹಲಿ ಪೊಲೀಸರಿಗೆ ಇ-ಮೇಲ್ ಮೂಲಕ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.
'ಅಲ್ ಖೈದಾ ಯೋಜಿತ ಬಾಂಬ್ ಸ್ಫೋಟ' ಎಂಬ ವಿಷಯದೊಂದಿಗಿನ ಬಾಂಬ್ ಬೆದರಿಕೆ ಇ-ಮೇಲ್ ಸ್ವೀಕರಿಸಿದ ಬಳಿಕ ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಾಂಬ್ ಬೆದರಿಕೆ ಇ-ಮೇಲ್ ಬಗ್ಗೆ ಐಜಿಐ ಪೊಲೀಸ್ ಠಾಣೆ ಶನಿವಾರ ವಿಮಾನ ನಿಲ್ದಾಣದಲ್ಲಿ ಏರ್ ಲೈನ್ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಕರಣಬೀರ್ ಸೂರಿ ಆಲಿಯಾಸ್ ಮೊಹಮ್ಮದ್ ಜಲಾಲ್ ಮತ್ತು ಕರಬೀರ್ ಸೂರಿ ಅವರ ಪತ್ನಿ ಶೈಲಿ ಶಾರ್ದಾ ಆಲಿಯಾಸ್ ಹಸೀನಾ ಸಿಂಗಾಪುರದಿಂದ ಭಾನುವಾರ ಭಾರತಕ್ಕೆ ಬರುತ್ತಿದ್ದು, ಐಜಿಐ ಮೇಲೆ ಬಾಂಬ್ ಹಾಕಲು 1-3 ದಿನಗಳಲ್ಲಿ ಯೋಜಿಸಿದ್ದಾರೆ ಎಂದು ತಿಳಿಸಿದೆ.
ಇನ್ನು ದೆಹಲಿ ಪೊಲೀಸರಿಗೆ ಬಾಂಬ್ ಬೆದರಿಕೆ ಇಮೇಲ್ ಮಾಡಿದ ನಂತರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.