ಶ್ರೀನಗರ, ಆ 08 (DaijiworldNews/PY): ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದಡಿ ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಐದು ಕಡೆ ಎನ್ಐಎ ದಾಳಿ ನಡೆಸಿದೆ.
ಸಾಂದರ್ಭಿಕ ಚಿತ್ರ
ಶೋಪಿಯಾನ್ ಸೇರಿದಂತೆ ಬುಡ್ಗಾಮ್, ದೋಡಾ, ಅನಂತನಾಗ್, ದೋಡಾ, ಕಿಶ್ತ್ವಾರ್, ರಾಜೌರಿ ಹಾಗೂ ರಂಬನ್ ಹಾಗೂ ಇತರೆ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿದೆ.
ಜಮಾತ್-ಎ-ಇಸ್ಮಾಮಿ ಸದಸ್ಯರ ಮನೆ, ಗುಲ್ ಮೊಹಮ್ಮದ್ ವಾರ್ ಮೇಲೆ ದಾಳಿ ನಡೆಸಲಾಗಿದೆ.
ಭಯೋತ್ಪಾದಕ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ಜಮ್ಮು-ಕಾಶ್ಮೀರದಾದ್ಯಂತ ಆರು ಮಂದಿಯನ್ನು ಎನ್ಐಎ ಬಂಧಿಸಿತ್ತು. ಜಮ್ಮು-ಕಾಶ್ಮೀರ ಸರ್ಕಾರದ 11 ಮಂದಿ ಉದ್ಯೋಗಿಗಳನ್ನು ಭಯೋತ್ಪಾದಕ ಸಂಪರ್ಕ ಹೊಂದಿದ್ದಕ್ಕಾಗಿ ವಜಾ ಮಾಡಿದ ಒಂದು ದಿನದ ಬಳಿಕ ದಾಳಿಗಳು ನಡೆದಿದ್ದವು. ವಜಾಗೊಂಡವರ ಪೈಕಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹುದ್ದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಅವರು ಇಬ್ಬರು ಪುತ್ರರು ಸೇರಿದ್ದಾರೆ.