ನವದೆಹಲಿ, ಆ 08 (DaijiworldNews/PY): "ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್/ ಟಿಒಪಿಎಸ್ ಯೋಜನೆಯೂ ಕಾರಣ" ಎಂದು ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ.
"2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಒಲಿಂಪಿಕ್ ಪೋಡಿಯಂ ಸ್ಕೀಮ್/ ಟಿಒಪಿಎಸ್ ಯೋಜನೆ ಪ್ರಾರಂಭಗೊಂಡಿತ್ತು" ಎಂದು ಹೇಳಿದ್ದಾರೆ.
"ಒಲಿಂಪಿಕ್ ಪೋಡಿಯಂ ಸ್ಕೀಮ್/ ಟಿಒಪಿಎಸ್ ಯೋಜನೆಯಡಿ, ಅಥ್ಲೀಟ್ಗಳಿಗೆ ಸರ್ಕಾರವು ಹಣಕಾಸು ನೆರವು ಸೇರಿದಂತೆ ತರಬೇತಿ, ಕೋಚಿಂಗ್ ಹಾಗೂ ವೈದ್ಯಕೀಯ ನೆರವು ನೀಡಿದೆ. 2020ರ ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು" ಎಂದಿದ್ದಾರೆ.
"ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ಸಂಭಾವ್ಯ ಪದಕ ವಿಜೇತರನ್ನು ಗುರುತಿಸಲು ನೇಮಿಸಲಾಗಿತ್ತು. ಈ ಸಮಿತಿಯನ್ನು ಹಾಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಮುನ್ನಡೆಸಿದರು" ಎಂದು ತಿಳಿಸಿದ್ದಾರೆ.