ನವದೆಹಲಿ, ಆ.07 (DaijiworldNews/HR): ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅದರ ಮರುಸ್ಥಾಪನೆಗಾಗಿ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ ಎಂದು ಐಎನ್ಸಿಯ ಅಧಿಕೃತ ಹ್ಯಾಂಡಲ್ ಶನಿವಾರ ಮಾಹಿತಿ ನೀಡಿದೆ.
"ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅದರ ಮರುಸ್ಥಾಪನೆಗಾಗಿ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ. ಅಲ್ಲಿಯವರೆಗೆ, ಅವರು ತಮ್ಮ ಇತರ ಎಸ್ ಎಂ ವೇದಿಕೆಗಳ ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕಹೊಂದಿರುತ್ತಾರೆ" ಎಂದಿದೆ.
ಇನ್ನು ರಾಹುಲ್ ಗಾಂಧಿ ಅವರು ನಮ್ಮ ಜನರಿಗಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತಾರೆ. ಅವರ ಉದ್ದೇಶಕ್ಕಾಗಿ ಹೋರಾಡುತ್ತಾರೆ" ಎಂದು ತಿಳಿಸಿದೆ.