ಬೆಂಗಳೂರು, ಆ 07 (DaijiworldNews/PY): "ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು!?" ಎಂದು ಬಿಜೆಪಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು!?" ಎಂದು ಕೇಳಿದೆ.
"ಹೌದು, ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು. ಹಾಗಾದರೆ (ಅ)ಯೋಗ್ಯರು ಯಾರು!?" ಎಂದು ಪ್ರಶ್ನಿಸಿದೆ.
"ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು. ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ! ಹಾಗಾದರೆ, (ಅ)ಯೋಗ್ಯರು ಯಾರು!?" ಎಂದು ಕೇಳಿದೆ.
"ಹೌದು, ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ, ದೇಶದ ಪ್ರಧಾನಿಯನ್ನೇ ಅಂಕೆಯಲ್ಲಿಟ್ಟುಕೊಂಡು ಕುಟುಂಬದ ಆಡಳಿತ ನಡೆಸುವ ಮೂಲಕ!! ಅಂಥಹ ಅವಮಾನಕರ ಇತಿಹಾಸ ಸೃಷ್ಟಿಸಿದ ಅ)ಯೋಗ್ಯ ತಾಯಿ- ಮಗ ಯಾರು!?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲೂ ಇತಿಹಾಸ ಸೃಷ್ಟಿಸಿದ ಕೆಲವು (ಅ)ಯೋಗ್ಯರು! ರೈತರ ಆತ್ಮಹತ್ಯೆ, ಹಿಂದು ಕಾರ್ಯಕರ್ತರ ನರಮೇಧಕ್ಕೆ ಕಾರಣರಾಗಿ, ಶಾಂತಿ ಮಂತ್ರ ಜಪಿಸುತ್ತಲೇ ತಮ್ಮದೇ ಪಕ್ಷದ ಮುಖಂಡರ ಬೆನ್ನಿಗೆ ಇರಿದು ಅಧಿಕಾರ ಪಡೆದಿದ್ದು ಅವರ ಹೆಗ್ಗಳಿಕೆ. ಹಾಗಾದರೆ, (ಅ)ಯೋಗ್ಯರು ಯಾರು!?" ಎಂದು ಕೇಳಿದೆ.
"ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬ ಗಾದೆ ಮಾತಿಗೆ ಈ ಮಹಾನಾಯಕ ಹೇಳಿ ಮಾಡಿಸಿದ ಜನ. ರಾಜರಾಜೇಶ್ವರಿ ನಗರದ ರಸ್ತೆಗೆ ತಮ್ಮ ತಂದೆಯ ಹೆಸರನ್ನೇ ಇಟ್ಟುಕೊಂಡವರು ಇಂದಿರಾ ಲೆಗಸಿ ಬಗ್ಗೆ ಮಾತನಾಡುವುದರಲ್ಲಿ ಅಚ್ಚರಿಯೇನಿಲ್ಲ!!!" ಎಂದಿದೆ.