ಅಹಮದಾಬಾದ್, ಆ 07 (DaijiworldNews/PY): "ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ಕಡಿಮೆ ಮಾಡಲು ಬಿಟ್ಟಿಲ್ಲ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ವಿಕಾಸ್ ದಿವಸ್ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, "ಪ್ರಪಂಚದಾದ್ಯಂತ ಅಭಿವೃದ್ಧಿಯ ಚಕ್ರ ನಿಂತಾಗ ಭಾರತದಲ್ಲಿ ಮಾತ್ರ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ದಿಯ ವೇಗ ಮುಂದುವರಿಯಿತು. ನಾವು ಕೊರೊನಾ ವಿರುದ್ದ ಹೋರಾಡಿದ್ದು, ಆ ಹೋರಾಟದಲ್ಲಿ ಗೆದ್ದಿದ್ದೇವೆ. ಅದೇ ಸಮಯದಲ್ಲಿ ನಾವು ಅಭಿವೃದ್ದಿಯನ್ನು ಮುಂದುವರಿಸಿದ್ದೇವೆ" ಎಂದಿದ್ದಾರೆ.
"ಕೊರೊನಾ ಸಾಂಕ್ರಾಮಿಕದ ಸಂದರ್ಭ ನಾವು ಅಭಿವೃದ್ದಿಯನ್ನು ಮುಂದುವರಿಸಿದ್ದೇವೆ. ಕೊರೊನಾ ವಿರುದ್ದದ ಹೋರಾಟದಲ್ಲಿ ದೇಶ ಗೆಲುವು ಸಾಧಿಸಿದೆ" ಎಂದು ತಿಳಿಸಿದ್ಧಾರೆ.
ಈ ಸಂದರ್ಭ ಅಮಿತ್ ಶಾ ಅವರು 5,300 ಕೋಟಿ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು.
"ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು900 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 630 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು 241 ಕೋಟಿ ಮೌಲ್ಯದ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ" ಎಂದು ಶಾ ತಿಳಿಸಿದ್ದಾರೆ.