ನವದೆಹಲಿ, ಆ 07 (DaijiworldNews/PY): "ಅಮೇರಿಕಾದ ಔಷಧ ತಯಾರಕ ಸಂಸ್ಥೆ ಜಾನ್ಸನ್ ಆ್ಯಂಡ್ ಜಾನ್ಸನ್ ಅಭಿವೃದ್ದಿ ಪಡಿಸಿದ ಏಕ ಡೋಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ" ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.
"ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ತನ್ನ ಏಕ ಡೋಸ್ ಕೊರೊನಾ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಈಗ ಭಾರತದಲ್ಲಿ 5 ಇಯುಎ ಲಸಿಕೆಗಳು ಇವೆ. ಇದು ಕೊರೊನಾ ವಿರುದ್ದದ ನಮ್ಮ ರಾಷ್ಟ್ರದ ಸಾಮೂಹಿಕ ಹೋರಾಟವನ್ನು ಇನ್ನುಷ್ಟು ಹೆಚ್ಚಿಸುತ್ತದೆ" ಎಂದು ಟ್ವೀಟ್ನಲ್ಲಿ ಮಾಂಡವಿಯಾ ತಿಳಿಸಿದ್ದಾರೆ.
ಭಾರತದಲ್ಲಿ ಈವರೆಗೆ ನಾಲ್ಕು ಲಸಿಕೆಗಳಿಗೆ ತುರ್ತು ಬಳಕೆಯ ದೃಢೀಕರಣವನ್ನು ನೀಡಲಾಗಿದೆ.
ಭಾರತದಲ್ಲಿ ತನ್ನ ಏಕ-ಡೋಸ್ ಕೋವಿಡ್ ಲಸಿಕೆಗಾಗಿ ತುರ್ತು ಬಳಕೆಯ ದೃಢೀಕರಣಕ್ಕಾಗಿ ಆಗಸ್ಟ್ 5ರಂದು ಜಾನ್ಸನ್ ಆ್ಯಂಡ್ ಜಾನ್ಸನ್ ಅರ್ಜಿ ಸಲ್ಲಿಸಿತ್ತು.
"ಬಯೋಲಾಜಿಕಲ್ ಇ ತನ್ನ ಜಾಗತಿಕ ಪೂರೈಕೆಯ ಸರಪಳಿ ಜಾಲದ ಮುಖ್ಯ ಭಾಗವಾಗಲಿದೆ" ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ತಿಳಿಸಿತ್ತು.