ಬೆಂಗಳೂರು, ಆ 07 (DaijiworldNews/MS): ಒಂದೆಡೆ ಅಣ್ಣಾಮಲೈ ವಿರುದ್ಧ ಸಿಎಂ ಸಿನಿಮೀಯ ಡೈಲಾಗ್ ಹೊಡೆಯುವುದು ಇನ್ನೊಂದೆಡೆ ಅವರನ್ನೇ ಬೆಂಬಲಿಸುವ ಮೂಲಕ ಸದಾರಮೆ ನಾಟಕದಿಂದ ಕನ್ನಡಿಗರನ್ನ ಮೂರ್ಖರನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ , ಟ್ವೀಟ್ ಮಾಡಿ ಮೇಕೆದಾಟು ವಿಚಾರವಾಗಿ ಹರಿಹಾಯ್ದಿದ್ದು, " ತಮಿಳು ನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ರಾಜ್ಯದ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟಿಸಿದನ್ನ ಸಚಿವ ಸಿ.ಟಿ. ರವಿ ರಿಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಪಕ್ಷದ ಕರ್ನಾಟಕದ ವಿರುದ್ಧದ ನಿಲುವು ಬಯಲಾಗಿದೆ. ರಾಜ್ಯ ವಿರೋಧಿ ಬಿಜೆಪಿಯಿಂದ ಕನ್ನಡಿಗರಿಗೆ ಅನ್ಯಾಯವೇ ಹೊರತು ನಯಾಪೈಸೆ ಉಪಯೋಗವಿಲ್ಲ.ಒಂದೆಡೆ ಅಣ್ಣಾಮಲೈ ವಿರುದ್ಧ ಸಿಎಂ ಸಿನಿಮೀಯ ಡೈಲಾಗ್ ಹೊಡೆಯುವುದು ಇನ್ನೊಂದೆಡೆ ಸಿ.ಟಿ. ರವಿ ಬೆಂಬಲಿಸುವುದು ಸದಾರಮೆ ನಾಟಕದಿಂದ ಕನ್ನಡಿಗರನ್ನ ಮೂರ್ಖರನ್ನಾಗಿಸಲು ಯತ್ನಿಸುತ್ತಿದೆ ಬಿಜೆಪಿ ಎಂದು ಹೇಳಿದೆ.
ಮೋದಿ ಸರ್ಕಾರ ತಮಿಳುನಾಡಿನ ಪರ ಇರಲಿದೆ ಎಂಬ ಅಣ್ಣಾಮಲೈ ಹೇಳಿಕೆಗೆ ಯಾವ ಬಿಜೆಪಿಗನೂ ಮಾತನಾಡದಿರುವುದು ರಾಜ್ಯದ್ರೋಹಿ ಬಿಜೆಪಿ ಎನ್ನಲು ಸಾಕ್ಷಿ ಎಂದು ಆರೋಪಿಸಿದೆ.