ಬೆಂಗಳೂರು, ಆ 07 (DaijiworldNews/MS): ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆ ಮಾಡಿದ ಎರಡು ದಿನದ ಬಳಿಕ ಇದೀಗ ಖಾತೆ ಹಂಚಿಕೆ ಯಶಸ್ವಿಯಾಗಿ ಮಾಡಿದ್ದಾರೆ. ಹೈಕಮಾಂಡ್ನಿಂದ ಅಧಿಕೃತವಾಗಿ ಅನುಮೋದನೆಗೊಂಡ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಪ್ರಮುಖ ಖಾತೆಗಳಾದ ಹಣಕಾಸು, ಬೆಂಗಳೂರು ಅಭಿವೃದ್ದಿ ಖಾತೆಗಳನ್ನು ತನ್ನಲ್ಲೇ ಇರಿಸಿಕೊಂಡಿದ್ದಾರೆ. ಇದಲ್ಲದೆ ಮತ್ತೊಂದು ಪ್ರಬಲ ಖಾತೆ ಎನಿಸಿದ ಗೃಹ ಖಾತೆಯನ್ನ ಅರಗ ಜ್ಞಾನೇಂದ್ರ ಅವರಿಗೆ ನೀಡಲಾಗಿದೆ. ಸುನಿಲ್ ಕುಮಾರ್ , ಬಿ. ಸಿ. ನಾಗೇಶ್ ಸೇರಿ ಮೊದಲ ಬಾರಿಗೆ ಸಚಿವರಾದ ಹಲವರಿಗೆ ಪ್ರಮುಖ ಕಾತೆಯ ಜವಾಬ್ದಾರಿ ವಹಿಸಲಾಗಿದೆ.
ಸಚಿವರು ಮತ್ತು ಅವರಿಗೆ ಹಂಚಿಕೆಯಾದ ಖಾತೆಗಳು:
1) ವಿ ಸುನೀಲ್ ಕುಮಾರ್: ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ
2) ಎಸ್ ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
3) ಕೋಟ ಶ್ರೀನಿವಾಸ ಪೂಜಾರಿ: ಸಾಮಾಜಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
4) ಬಿ ಶ್ರೀರಾಮುಲು: ಸಾರಿಗೆ ಮತ್ತು ಎಸ್ಟಿ ಕಲ್ಯಾಣ
5) ವಿ ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ
6) ಉಮೇಶ್ ಕತ್ತಿ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ
7) ಕೆಎಸ್ ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ
8) ಜೆ ಸಿ ಮಾಧು ಸ್ವಾಮಿ: ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
9) ಅರಗ ಜ್ಞಾನೇಂದ್ರ: ಗೃಹ ಖಾತೆ
10) ಡಾ. ಅಶ್ವಥ ನಾರಾಯಣ: ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ
11) ಸಿಸಿ ಪಾಟೀಲ್: ಲೋಕೋಪಯೋಗಿ
12) ಆನಂದ್ ಸಿಂಗ್: ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ
13) ಆರ್ ಅಶೋಕ್: ಕಂದಾಯ ಇಲಾಖೆ
14) ಪ್ರಭು ಚೌಹಾಣ್: ಪಶು ಸಂಗೋಪನೆ
15) ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
16) ಶಿವರಾಮ್ ಹೆಬ್ಬಾರ್: ಕಾರ್ಮಿಕ ಸಚಿವ
17) ಎಸ್ ಟಿ ಸೋಮಶೇಖರ್: ಸಹಕಾರ
18) ಬಿ ಸಿ ಪಾಟೀಲ್: ಕೃಷಿ
19) ಬೈರತಿ ಬಸವರಾಜು: ನಗರ ಅಭಿವೃದ್ಧಿ
20) ಡಾ. ಕೆ ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
21) ಕೆ ಗೋಪಾಲಯ್ಯ: ಅಬಕಾರಿ ಖಾತೆ
22) ಶಶಿಕಲಾ ಜೊಲ್ಲೆ: ಮುಜರಾಯಿ ಮತ್ತು ಹಜ್ ವಕ್ಫ್
23) ಎಂಟಿಬಿ ನಾಗರಾಜು: ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ
24) ನಾರಾಯಣಗೌಡ: ರೇಷ್ಮೆ ಖಾತೆ, ಯುವಜನ ಕ್ರೀಡೆ
25) ಬಿ. ಸಿ. ನಾಗೇಶ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ
26 )ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ
27) ಹಾಲಪ್ಪ ಆಚಾರ್: ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಸಬಲೀಕರಣ
28) ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಖಾತೆ
29) ಮುನಿರತ್ನ: ತೋಟಗಾರಿಕೆ ಮತ್ತು ಯೋಜನಾ ಖಾತೆ, ಸಾಂಖ್ಯಿಕ ಇಲಾಖೆ