ಜೈಪುರ, ಆ 07 (DaijiworldNews/PY): ಬ್ಲೂಟೂತ್ ಇಯರ್ ಫೋನ್ ಸ್ಪೋಟಗೊಂಡ ಪರಿಣಾಮ 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ.
ಜೈಪುರದ ಚೋಮು ಪ್ರದೇಶದ ಉದಯಪುರ ನಿವಾಸಿ ರಾಕೇಶ್ ನಗರ್ ಬ್ಲೂಟೂತ್ ಇಯರ್ ಪೋನ್ಗಳನ್ನು ಬಳಿಸಿ ಪೋನ್ನಲ್ಲಿ ಮಾತನಾಡುತ್ತಿದ್ದ. ಈ ಸಂದರ್ಭ ಇಯರ್ ಫೋನ್ ಸ್ಪೋಟಗೊಂಡಿದೆ.
ವೈದ್ಯರ ಪ್ರಕಾರ, ಬಾಲಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಪರಿಣಾಮ ಯುವಕರ ಎರಡೂ ಕಿವಿಗೆ ಹಾನಿಯಾಗಿ ಆಘಾತಕ್ಕೊಳಗಾದ ಬಾಲಕನಿಗೆ ಹೃದಯಘಾತವಾಗಿದೆ. ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇದು ದೇಶದಲ್ಲೇ ನಡೆದ ಮೊದಲ ಪ್ರಕರಣವಾಗಿದೆ. ಹೃದಯಾಘಾತದಿಂದ ಬಾಲಕ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ.