ದೆಹಲಿ, ಆ 07 (DaijiworldNews/MS): ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಯುವತಿಯ ಕುಟುಂಬ ಸದಸ್ಯರನ್ನು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ ಬಳಿಕ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಜೊತೆಗೆ ಟ್ವೀಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ವೇದಿಕೆಯಿಂದಲೇ ತೆಗೆದು ಹಾಕಿದೆ. 'ಈ ಟ್ವೀಟ್ ಇನ್ನು ಮುಂದೆ ಲಭ್ಯವಿರುವುದಿಲ್ಲ' ಎಂಬ ಪಟ್ಟಿಯನ್ನು ರಾಹುಲ್ ಪೋಸ್ಟ್ಗೆ ಟ್ವಿಟರ್ ಲಗತ್ತಿಸಿದೆ.
ಸಂತ್ರಸ್ತೆಯ ಕುಟಂಬವನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಅವರೋಂದಿಗಿನ ಪೋಟೋ ಹಾಕಿ 'ಹೆತ್ತವರ ಕಣ್ಣೀರು ಈ ವಿಚಾರವನ್ನು ಸಾರಿ ಹೆಳುತ್ತದೆ, ಅವರ ಮಗಳು, ಈ ದೇಶದ ಪುತ್ರಿಯಾಗಿದ್ದಾಳೆ . ಆಕೆ ನ್ಯಾಯಕ್ಕೆ ಅರ್ಹಳು. ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ,' ಎಂದು ಬರೆದುಕೊಂಡಿದ್ದರು. ಸಂತ್ರಸ್ತೆ ಕುಟುಂಬದ ಫೋಟೊವನ್ನು ಪೋಸ್ಟ್ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬುಧವಾರ ದೆಹಲಿ ಪೊಲೀಸ್ ಮತ್ತು ಟ್ವಿಟರ್ಗೆ ಆಗ್ರಹಿಸಿತ್ತು. ಇದು ಲೈಂಗಿಕ ಅಪರಾಧಗಳ ಕಾಯ್ದೆಯಲ್ಲಿ ಅಪರಾಧ ಎಂದೂ ಅದು ವಾದಿಸಿತ್ತು.
ಇದೇ ಹಿನ್ನೆಲೆಯಲ್ಲಿ ಟ್ವೀಟರ್ ಸಂಸ್ಥೆ ರಾಹುಲ್ ಟ್ವೀಟ್ ವಿರುದ್ಧ ಕ್ರಮ ಕೈಗೊಂಡಿದೆ. ಟ್ವೀಟ್ ಮೇಲೆ ಕ್ಲಿಕ್ ಮಾಡಿದರೆ, "ಈ ಟ್ವೀಟ್ ಷರತ್ತುಗಳನ್ನು ಉಲ್ಲಂಘಿಸಿದೆ" ಎಂಬ ಸಂದೇಶ ಮೂಡುತ್ತಿದೆ.