ಬೆಂಗಳೂರು, ಆ 06 (DaijiworldNews/PY): "ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ನೀವು ಪಾದಪೂಜೆ ಮಾಡುವ ಗಾಂಧಿ ಕುಟುಂಬದ ನಾಯಕಿಯಲ್ಲವೇ? ಒಂದು ಕುಟುಂಬದ ಹಿತಾಸಕ್ತಿ ರಕ್ಷಣೆಯ ಬದಲು ದೇಶದ ಪರವಾಗಿ ಧ್ವನಿ ಎತ್ತಿ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಅಂಬೇಡ್ಕರ್ ಕಾಲದಿಂದಲೂ ದಲಿತರ ನ್ಯಾಯಯುತ ಬೇಡಿಕೆಯನ್ನು ಕಾಂಗ್ರೆಸ್ ಹತ್ತಿಕ್ಕುತ್ತಲೇ ಬಂದಿದೆ. ಒಳಮೀಸಲು ಸೌಲಭ್ಯಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿರುವ ಸಮುದಾಯಕ್ಕೆ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲೂ ಕಾಂಗ್ರೆಸ್ ಪ್ರಾತಿನಿಧ್ಯ ನೀಡಿಲ್ಲ. ಸಾಮಾಜಿಕ ನ್ಯಾಯಕ್ಕೆ ಗಾಂಧಿ ಕುಟುಂಬ ನೀಡುವ ಮನ್ನಣೆಯಿಷ್ಟೆ!" ಎಂದಿದೆ.
"ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ, ಪ್ರತಿಪಕ್ಷಗಳ ಧ್ವನಿ ಅಡಗಿಸುವ ಸಂವಿಧಾನ ಬಾಹಿರ ಕ್ರಮವನ್ನು ಕಾಂಗ್ರೆಸ್ ಪಕ್ಷ ಮಾತ್ರ ಪಾಲಿಸಲು ಸಾಧ್ಯ. ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ನೀವು ಪಾದಪೂಜೆ ಮಾಡುವ ಗಾಂಧಿ ಕುಟುಂಬದ ನಾಯಕಿಯಲ್ಲವೇ? ಒಂದು ಕುಟುಂಬದ ಹಿತಾಸಕ್ತಿ ರಕ್ಷಣೆಯ ಬದಲು ದೇಶದ ಪರವಾಗಿ ಧ್ವನಿ ಎತ್ತಿ" ಎಂದು ಹೇಳಿದೆ.
"ಗಾಂಧಿ ಕುಟುಂಬದ ಹಿತಾಸಕ್ತಿ ಹಾಗೂ ಅಧಿಕಾರ ಲಾಲಸೆಯನ್ನು ಹೊರತುಪಡಿಸಿ ಸಂಸತ್ತಿನಲ್ಲಿ ಬೇರೆ ಏನಾದರೂ ವಿಚಾರ ಪ್ರಸ್ತಾಪಿಸಿದ ಉದಾಹರಣೆ ಇದೆಯೇ, ಖರ್ಗೆ!? ಜನಪರ ವಿಚಾರಕ್ಕೆ ಧ್ವನಿ ಎತ್ತುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಿ ಖರ್ಗೆಯವರೇ!" ಎಂದು ತಿಳಿಸಿದೆ.