ಬಾಗಲಕೋಟೆ, ಆ 06 (DaijiworldNews/PY): "ಸಿಎಂ ಆಗಬೇಕು ಎನ್ನುವ ಆಸೆ ನನಗೂ ಇದೆ. ಆದರೆ, ನನ್ನ ಅದೃಷ್ಟ ಕೂಡಿ ಬಂದಿಲ್ಲ" ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಇನ್ನೂ 15 ವರ್ಷ ನನ್ನ ಆಯುಷ್ಯ ಇದೆ. ನನ್ನ ಪ್ರಕಾರ 80 ವರ್ಷದವರೆಗೆ ಪಕ್ಷದಲ್ಲಿ ಇರಬೇಕಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಆಸೆ ಇನ್ನೂ ಕಮರಿಲ್ಲ" ಎಂದಿದ್ದಾರೆ.
"ಖಾತೆ ಹಂಚಿಕೆ ವಿಚಾರ ರಾಜ್ಯದ ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಯಾವ ಖಾತೆಗಳನ್ನು ನೀಡುತ್ತಾರೋ ಅದನ್ನು ನಿರ್ವಹಿಸುತ್ತೇನೆ. ನನಗೆ ಯಾವುದೇ ಖಾತೆ ನೀಡಿದರೂ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.
"ಸಿಎಂ ಜೊತೆ ಅಥವಾ ಹೈಕಮಾಂಡ್ ಜೊತೆ ನಾನು ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಜನ ಬಯಸುವ ಖಾತೆ ನೀಡಲಿ. ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ" ಎಂದು ಹೇಳಿದ್ದಾರೆ.