ಉತ್ತರ ಕನ್ನಡ, ಆ.06 (DaijiworldNews/HR): ಎನ್ಐಎ ಅಧಿಕಾರಿಗಳು ಈಗಾಗಲೇ ಮಾಜಿ ಸಚಿವ ಬಿಎಂ ಇದಿನಬ್ಬ ಅವರ ಪುತ್ರನ ನಿವಾಸದ ಮೇಲೂ ದಾಳಿ ನಡೆಸಿದ್ದರು. ಇದೀಗ ದಾಳಿಯನ್ನು ಮತ್ತೆ ಭಟ್ಕಳದಲ್ಲಿ ಐಸಿಸ್ ಉಗ್ರರೊಂದಿಗೆ ನಂಟಿನ ಶಂಕೆಯ ಹಿನ್ನಲೆಯಲ್ಲಿ ಮೂವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಾಂಧರ್ಭಿಕ ಚಿತ್ರ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಉಮರ್ ಸ್ಟ್ರೀಟ್ ಹಾಗೂ ಸಾಗರ ರಸ್ತೆಯಲ್ಲಿನ ಮನೆಗಳ ಮೇಲೆ ಖಚಿತ ಮಾಹಿತಿಯಿಂದ ಎನ್ಐಎ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಇಂದು ನಡೆಸಿದ ದಾಳಿಯಲ್ಲಿ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದಂತ ಶಂಕೆಯ ಹಿನ್ನಲೆಯಲ್ಲಿ, ಮೂವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮಂಗಳೂರಿನ ಉಳ್ಳಾಲದಲ್ಲಿರುವ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಪುತ್ರ ಬಿಎಂ ಬಾಷಾ ಅವರು, ಉಗ್ರರೊಂದಿಗೆ ನಂಟಿನ ಶಂಕೆಯ ಹಿನ್ನಲೆಯಲ್ಲಿ ಎನ್ಐಎ ಅಧಿಕಾರಿಗಳ ತಂಡ, ನಿವಾಸದ ಮೇಲೆ ದಾಳಿ ನಡೆಸಿ, ತನಿಖೆ ನಡೆಸಿತ್ತು.