ನವದೆಹಲಿ, ಆ 06 (DaijiworldNews/PY): ಜಾನ್ಸನ್ ಹಾಗೂ ಜಾನ್ಸನ್, ಭಾರತದಲ್ಲಿ ಏಕ ಡೋಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
"ಆಗಸ್ಟ್ 5ರಂದು ಜಾನ್ಸನ್ ಹಾಗೂ ಜಾನ್ಸನ್ ಮನವಿ ಸಲ್ಲಿಸಿದೆ" ಎಂದು ಕಂಪೆನಿಯ ವಕ್ತಾರರು ಹೇಳಿದ್ದಾರೆ.
ಕಂಪೆನಿಯು ತನ್ನ ಏಕ ಡೋಸ್ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಬದ್ದವಾಗಿದೆ ಹಾಗೂ ಭಾರತ ಸರ್ಕಾರದೊಂದಿಗೆ ನಡೆಯುತ್ತಿರುವ ಚರ್ಚೆಗಳನ್ನು ಎದುರು ನೋಡುತ್ತಿದೆ ಎಂದು ಈ ಹಿಂದೆ ಹೇಳಿತ್ತು.
"ಇದು ಒಂದು ಮೈಲುಗಲ್ಲಾಗಿದ್ದು, ಕಂಪೆನಿಯು ಏಕ ಡೋಸ್ ಕೊರೊನಾ ಲಸಿಕೆಯನ್ನು ಭಾರತದ ಜನರಿಗೆ ಹಾಗೂ ಪ್ರಪಂಚದ ಇತರ ಭಾಗಗಳಿಗೆ ಬಯಾಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ಪೂರೈಕೆ ಮಾಡಲಿದೆ" ಎಂದು ವಕ್ತಾರರು ತಿಳಿಸಿದ್ದಾರೆ.