ನವದೆಹಲಿ, ಆ 06 (DaijiworldNews/PY): "ವೇಟ್ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಮತ್ತೋರ್ವ ಒಲಿಂಪಿಯನ್ಗೆ ಅಮೇರಿಕಾದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಹಾಗೂ ತರಬೇತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್ಗಿಂತ ಮುನ್ನವೇ ನೆರವಾಗಿದ್ದರು" ಎಂದು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
"ಮೀರಾಬಾಯಿ ಚಾನು ಅವರಿಗೆ ಅಮೇರಿಕಾಕ್ಕೆ ಹೋಗಲು ಪ್ರಧಾನಿ ಮೋದಿ ಅವರು ನೆರವಾಗದೇ ಇರುತ್ತಿದ್ದಲ್ಲಿ, ಒಲಿಂಪಿಕ್ಸ್ನಲ್ಲಿ ಸಾಧನೆಗೈಯಲು ಆಕೆಯಿಂದ ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ನೀಡಿದ ಸಹಾಯದ ಬಗ್ಗೆ ನನಗೆ ಆಶ್ಚರ್ಯವಾಯಿತು. ಪ್ರಧಾನಿ ಮೋದಿ ಅವರು, ಆಕೆಯ ವೈದ್ಯಕೀಯ ವೆಚ್ಚ ಸೇರಿದಂತೆ ತರಬೇತಿ ಹಾಗೂ ಅಗತ್ಯಗಳನ್ನು ನೋಡಿಕೊಳ್ಳಲು ನೆರವಾಗಿದ್ದಾರೆ. ಪ್ರಧಾನಿ ಮೋದಿ ಅವರು ಮೀರಾಬಾಯಿ ಚಾನು ಅವರನ್ನು ಅಮೇರಿಕಾಕ್ಕೆ ಕಳುಹಿಸಿ ತರಬೇತಿ ಕೊಡೊಸಿದ್ದಾರೆ. ಸ್ವತಃ ಮೀರಾಬಾಯಿ ಚಾನು ಅವರೇ ಈ ವಿಚಾರದ ಬಗ್ಗೆ ನನಗೆ ತಿಳಿಸಿದ್ದರು" ಎಂದು ಹೇಳಿದ್ದಾರೆ.
"ಮೀರಾಬಾಯಿ ಚಾನು ಅವರ ಬೆನ್ನು ನೋವಿನ ವಿಚಾರದ ಬಗ್ಗೆ ತಿಳಿದ ತಕ್ಷಣವೇ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿದರು. ಕೇಂದ್ರವು ಆಕೆಯ ವೆಚ್ಚಗಳನ್ನು ಭರಿಸಿದೆ. ಪ್ರಧಾನಿ ಮೋದಿ ಅವರು ಕೇವಲ ಚಾನು ಅವರಿಗೆ ಮಾತ್ರವಲ್ಲಿ ಇನ್ನೋರ್ವ ಕ್ರೀಡಾಪಟುವಿಗೂ ಸಹಾಯ ಮಾಡಿದ್ದಾರೆ. ಆದರೆ, ಆ ಕ್ರೀಡಾಪಟುವಿನ ಹೆಸರನ್ನು ನಾನು ಬಹಿರಂಗಪಡಿಸುವುದಿಲ್ಲ" ಎಂದು ತಿಳಿಸಿದ್ದಾರೆ.