ನವದೆಹಲಿ, ಆ 06 (DaijiworldNews/PY): "ಭಾರತದಲ್ಲಿ ಮುಂದಿನ ನಾಲ್ಕು ತಿಂಗಳಿನಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ 136 ಕೋಟಿ ಡೋಸ್ ಲಭ್ಯವಾಗುವ ನಿರೀಕ್ಷೆ ಇದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರವು, ಭಾರತದ ಲಸಿಕೆ ಉತ್ಪಾದನೆ ಹಾಗೂ ವಿತರಣಾ ಗುರಿಗಳ ವಿವರಗಳನ್ನು ಪಟ್ಟಿ ಮಾಡಿದ್ದರು, ಕೊರೊನಾ ಪಬ್ಲಿಕ್ ಹೆಲ್ ರೆಸ್ಪಾನ್ಸ್ ಪ್ರೊ-ಆಕ್ಟಿವ್, ಪ್ರಿ ಎಂಪ್ಟಿವ್ ಹಾಗೂ ಗ್ರೇಡೆಡ್ ರೆಸ್ಪಾನ್ಸ್ ಗೈಡೆಡ್ ಎಪಿಡೆಮಿಯಾಲಾಜಿಕಲ್ ಹಾಗೂ ಸೈಂಟಿಫಿಕ್ ರಿಗರ್ ಎನ್ನುವ ಶೀರ್ಷಿಕೆ ವರದಿಯು ಸಂಸದರಿಗೆ ಪ್ರಧಾನಿ ಕಚೇರಿಯಿಂದ ನೀಡಲಾದ ಭಾರತದ ಲಸಿಕೆ ಉತ್ಪಾದನೆಯ ಗುರಿಗಳ ವಿವರಗಳನ್ನು ಒಳಗೊಂಡಿದೆ.
"ಡಿಸೆಂಬರ್ವರೆಗೆ, ಕೋವ್ಯಾಕ್ಸಿನ್ 3.15 ಕೋಟಿ, ಕೋವಿಶೀಲ್ಡ್ 23 ಕೋಟಿ ಸೇರಿದಂತೆ ಒಟ್ಟು 26.15 ಕೋಟಿ ಡೋಸ್ ಲಭ್ಯವಿರಲಿದೆ" ಎಂದು ಕೇಂದ್ರ ಮಾಹಿತಿ ನೀಡಿದೆ.
"ಕೋವ್ಯಾಕ್ಸಿನ್ 5.25 ಕೋಟಿ, ಕೋವಿಶೀಲ್ಡ್ 23 ಕೋಟಿ, ಒಟ್ಟು 28.25 ಕೋಟಿ ಡೋಸ್ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ದೇಶಾದ್ಯಂತ ಲಭ್ಯವಿರಲಿದೆ" ಎಂದು ಕೇಂದ್ರ ಹೇಳಿದೆ.
"ಆಗಸ್ಟ್ ತಿಂಗಳಿನಿಂದ ಒಟ್ಟು ಕೊರೊನಾ ವ್ಯಾಕ್ಸಿನ್ ಡೋಸೇಜ್ಗಳು, ಕೋವ್ಯಾಕ್ಸಿನ್ 21.55 ಕೋಟಿ, ಕೋವಿಶೀಲ್ಡ್ 115 ಕೋಟಿ, ಲಸಿಕಾ ಅಭಿಯಾನದಲ್ಲಿ ಒಟ್ಟು 136.55 ಕೋಟಿ ಡೋಸ್ ನೀಡಲಾಗುತ್ತದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರವು ಆಗಸ್ಟ್ 2021ರಿಮದ ಡಿಸೆಂಬರ್ವರೆಗೆ ನೀಡಿದ ಮುಂಗಡ ಆದೇಶದ ಪ್ರಕಾರ, "ಪ್ರತಿಯೊಂದು ಡೋಸ್ಗೆ 215.25 ರಂತೆ 8071.87 ಕೋಟಿ ವೆಚ್ಚದಲ್ಲಿ ಲಸಿಕೆಗಳನ್ನು ಖರೀದಿ ಮಾಡಲಾಗುತ್ತದೆ. ಸರ್ಕಾರವು 28.5 ಕೋಟಿ ಕೋವಾಕ್ಸಿನ್ ಡೋಸ್ಗಳನ್ನು ಭಾರತ್ ಬಯೋಟೆಕ್ನಿಂದ ಪ್ರತಿ ಡೋಸ್ ಗೆ ರೂ 225.75 ರಂತೆ 6,433.87 ಕೋಟಿ ವೆಚ್ಚದಲ್ಲಿ ಖರೀದಿಸುತ್ತದೆ. ಒಟ್ಟು ಸುಮಾರು 88 ಕೋಟಿ ಲಸಿಕೆ ಪ್ರಮಾಣಗಳನ್ನು ಉತ್ಪಾದನೆ ಮಾಡಲಾಗುತ್ತದೆ. 66 ಕೋಟಿ ಡೋಸ್ಗಳನ್ನು ಕೇಂದ್ರ ಸರ್ಕಾರವು ಖರೀದಿ ಮಾಡಲಿದೆ" ಎಂದು ಹೇಳಿದೆ.