ಲಕ್ನೋ, ಆ 05 (DaijiworldNews/MS): ಉತ್ತರ ಪ್ರದೇಶ ಸರ್ಕಾರದ ವಿರುದ್ಧ 'ಬಿಜೆಪಿ ಗದ್ದೀ ಛೋಡೋ' (ಅಧಿಕಾರ ಬಿಡಿ) ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದೆ.
ಆಗಸ್ಟ್ 9 ಮತ್ತು 10 ರಂದು ನಿರುದ್ಯೋಗ, ಮಹಿಳಾ ಭದ್ರತೆ, ಭ್ರಷ್ಟಾಚಾರ, ರೈತರ ಕುಂದುಕೊರತೆಗಳು, ಹಾಗೂ ಇತರ ವಿಚಾರಗಳ ಕುರಿತು ಉತ್ತರಪ್ರದೇಶದ ಎಲ್ಲಾ ವಿಧಾನಸಭಾ ಭಾಗಗಳಲ್ಲಿ ಮೆರವಣಿಗೆಗಳು ಮತ್ತು ಪ್ರತಿಭಟನೆಗಳೊಂದಿಗೆ "ಬಿಜೆಪಿ ಗದ್ದಿ ಚೋಡೋ" (ಅಧಿಕಾರವನ್ನು ತೊರೆಯಿರಿ) ಅಭಿಯಾನವನ್ನು ಕಾಂಗ್ರೆಸ್ ನಡೆಸುತ್ತದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ನಿರ್ದೇಶನದ ಮೇರೆಗೆ, ಆಗಸ್ಟ್ 9 ಮತ್ತು 10 ರಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಣದುಬ್ಬರ, ನಿರುದ್ಯೋಗ, ರೈತರ ಸಮಸ್ಯೆಗಳು, ಮಹಿಳೆಯರ ಸುರಕ್ಷತೆ ಮತ್ತು ಭ್ರಷ್ಟಾಚಾರದ ವಿರುದ್ಧ ಮೆರವಣಿಗೆಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಬುಧವಾರ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದ ಎಲ್ಲ ಸಮುದಾಯಗಳು ಬಿಜೆಪಿ ಸರ್ಕಾರದ ಆಡಳಿತ ಕಂಡು ತೀವ್ರ ನಿರಾಸೆಯಾಗಿವೆ. ಎಲ್ಲೆಡೆಯೂ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಲಲ್ಲು ಹೇಳಿದರು.
ಮುಂದಿನ ವರ್ಷ ಪೆಬ್ರವರಿ ಅಥವಾ ಮಾರ್ಚ್ನಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ.