ಬೆಂಗಳೂರು, ಆ 05 (DaijiworldNews/MS): ಮಾಜಿ ಮುಖ್ಯಮಂತ್ರಿ ಬಿ.ಸ್ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದ ಮೇಲೆ ಅವರಿಗೆ ಮಂಡಿಯೂರಿ ಶರಣಾಯಿತು ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿರುವ ಕಾಂಗ್ರೆಸ್, " ಬಿ.ಸ್ ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ, ತಮ್ಮ ವಿರುದ್ಧದ ಬಂಡಾಯಗಾರರನ್ನ ಸಂಪುಟದಿಂದ ದೂರವಿಡುವ ಮೂಲಕ ಮೀರ್ಸಾದಿಕ್ ನಳಿನ್ ಕುಮಾರ್ ಕಟೀಲ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ! ಕಟೀಲ್ ಕಾಮಿಡಿ ಮಾಡಲು ಮಾತ್ರ! ಎಂದ ಕಾಂಗ್ರೆಸ್ ಮುಂದುವರಿಸಿ ಬಿ.ಸ್ ಯಡಿಯೂರಪ್ಪಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ ಬಿ.ಸ್ ಯಡಿಯೂರಪ್ಪ ಅವರೇ ಹೈಕಮಾಂಡ್ ಆಗಿದ್ದಾರೆ ಮೊದಲೆಲ್ಲ ಕಾಂಗ್ರೆಸ್ಗೆ 'ಹೈಕಮಾಂಡ್ ಸಂಸ್ಕೃತಿ' ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ 'ಬಲಿಷ್ಠ ಹೈಕಮಾಂಡ್' ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು! ಎಂದು ಹೇಳಿದೆ.
ಇನ್ನೊಂದು ಟ್ವೀಟ್ ನಲ್ಲಿ ದವಳಗಿರಿಸರ್ಕಾರ ದ ಸಂಪುಟದಲ್ಲಿ ದಲಿತರನ್ನ ಕಡೆಗಣಿಸಿ ಬಿಜೆಪಿ ತನ್ನ ದಲಿತ ವಿರೋಧಿ ನೀತಿಯನ್ನ ಮತ್ತೊಮ್ಮೆ ನಿರೂಪಿಸಿದೆ. ದಲಿತರನ್ನು ಸಿಎಂ ಮಾಡುವುದಿರಲಿ ಕೊನೆ ಪಕ್ಷ ಸಂಪುಟದಲ್ಲಿಯೂ ಪ್ರಾತಿನಿಧ್ಯ ನೀಡದ ಬಿಜೆಪಿ ಇತರ ಪಕ್ಷಗಳಿಗೆ ಆರೋಪಿಸುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ ಎಂದು ಆರೋಪಿಸಿದೆ.