ನವದೆಹಲಿ, ಆ 05 (DaijiworldNews/PY): ಕೊರೊನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥರಾದ 18 ವರ್ಷದೊಳಗಿನ ಮಕ್ಕಳಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ. ಗಳ ಉಚಿತ ಆರೋಗ್ಯ ವಿಮೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ವಿಚಾರವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಕಟಿಸಿದ್ದು, "ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ. ಗಳ ಉಚಿತ ಆರೋಗ್ಯ ವಿಮೆ ನೀಡಲಾಗುವುದು ಹಾಗೂ ಪಿಎಂ ಕೇರ್ಸ್ನಿಂದ ಪಾವತಿಸಲಾಗುವುದು" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾದಿಂದ ಅನಾಥರಾದ ಮಕ್ಕಳ ಕಾಳಜಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಅಂಗವಾಗಿ 18 ವರ್ಷದೊಳಗಿನ ಮಕ್ಕಳಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ. ಗಳ ಉಚಿತ ಆರೋಗ್ಯ ವಿಮೆ ನೀಡಲಾಗುತ್ತದೆ. ಪಿಎಂ ಕೇರ್ಸ್ನಿಂದ ಇದರ ವಿಮಾ ಕಂತನ್ನು ಪಾವತಿಸಲಾಗುತ್ತದೆ" ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ಯೋಜನೆಗಳ ವಿವರಗಳನ್ನು ಪೋಸ್ಟ್ ಮಾಡಿರುವ ಠಾಕೂರ್, ಭಾರತವನ್ನು ಸ್ವಾವಲಂಬಿಯಾಗಿ ಮಾಡುವ ಸಲುವಾಗಿ ಸರ್ಕಾರ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರಿ ವೆಬ್ಸೈಟ್ನ ಲಿಂಕ್ ಕೂಡಾ ಪ್ರಕಟಿಸಿದ್ದಾರೆ.