ಬೆಂಗಳೂರು, ಆ 02 (DaijiworldNews/SM): ರಾಜಕೀಯ ಬಿಡಲ್ಲ, ಆಡಳಿತ ಮಾಡಲ್ಲ' ಎಂಬಂತಿರುವ ಕರ್ನಾಟಕ ಬಿಜೆಪಿ ಸರ್ಕಾರ, ಕೋವಿಡ್ ನಿಯಂತ್ರಣದಲ್ಲಿದೆ ಎಂದು ಮಂಕುಬೂದಿ ಎರಚುತ್ತಿದೆ ಎಂಬುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮೌಲ್ಯವು 1ಕ್ಕಿಂತ ಹೆಚ್ಚಿದ್ದು, ಕೋವಿಡ್ ಅತಿಯಾಗಿರುವ 8 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಕೇಂದ್ರ ಸರ್ಕಾರವೇ ಹೇಳುತ್ತಿದೆ. ವಿಪರ್ಯಾಸವೆಂದರೆ, ಕೋವಿಡ್ ನಿಯಂತ್ರಿಸಲು ಬಿಜೆಪಿಗೆ ಸಮಯವಿಲ್ಲ! ಎಂಬುವುದಾಗಿ ಟ್ವಿಟ್ಟರ್ ನಲ್ಲಿ ಡಿಕೆಶಿ ಟೀಕಿಸಿದ್ದಾರೆ.