ನವದೆಹಲಿ, ಆ 04 (DaijiworldNews/PY): ಅಧಿಕಾರಿ ದುರ್ಬಳಕೆ ಹಾಗೂ ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿದೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಈ ಬಗ್ಗೆ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದ್ದು, ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
ಡಿಒಪಿಟಿ ಇಲಾಖೆಯು ಗೃಹ ಸಚಿವಾಲಯದ ಈ ಶಿಫಾರಸನ್ನು ಐಪಿಎಸ್ ಅಧಿಕಾರಿಗಳ ನೇಮಕಾತಿ ಸಂಸ್ಥೆಯಾದ ಕೇಂದ್ರ ಲೋಕಸೇವಾ ಆಯೋಗಕ್ಕೆ ರವಾನಿಸಿದೆ ಎಂದಿದ್ದಾರೆ.
ಗೃಹ ಸಚಿವಾಲಯ ಈ ಕ್ರಮ ಅನುಮೋದನೆಗೊಂಡಲ್ಲಿ, ಅಲೋಕ್ ವರ್ಮಾ ಅವರ ಪಿಂಚಣಿ ಹಾಗೂ ನಿವೃತ್ತಿಯ ಬಳಿಕ ದೊರೆಯುವ ಸೌಲಭ್ಯಗಳನ್ನು ತಾತ್ಕಾಲಿಕ ಅಥವಾ ಶಾಶ್ವತವಾಗಿ ಸರ್ಕಾರ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ.