ಬೆಂಗಳೂರು, ಆ 04 (DaijiworldNews/PY): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರುವ ನಾಯಕರ ಪಟ್ಟಿ ಕೊನೆಗೂ ಅಂತಿಮವಾಗಿದ್ದು, 29 ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಇಂದು ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, "ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲರಿಗೂ ಶುಭ ಹಾರೈಸಿದರು. ಈ ಬಾರಿ ಬಿಜೆಪಿ ಹೈಕಮಾಂಡ್ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಗೆ ಮುಂದಾಗಿಲ್ಲ. 7 ಒಕ್ಕಲಿಗ ಸೇರಿದಂತೆ 3 ದಲಿತ, 8 ಲಿಂಗಾಯತ, 1 ಎಸ್.ಟಿ, 7 ಒಬಿಸಿ, 3 ಎಸ್.ಸಿ., ಹಾಗೂ ಮಹಿಳಾ ಶಾಸಕಿಗೂ ಸ್ಥಾನ ನೀಡಲಾಗಿದೆ" ಎಂದಿದ್ದಾರೆ.
ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ:
ಎಸ್ ಅಂಗಾರ - ಸುಳ್ಯ
ಕೋಟಾ ಶ್ರೀನಿವಾಸ ಪೂಜಾರಿ - ಎಂಎಲ್ಸಿ
ಸುನೀಲ್ ಕುಮಾರ್ - ಕಾರ್ಕಳ
ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
ಆರ್.ಅಶೋಕ್- ಪದ್ಮನಾಭ ನಗರ
ಬಿ.ಸಿ ಪಾಟೀಲ್ - ಹಿರೇಕೇರೂರು
ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರಂ
ಉಮೇಶ್ ಕತ್ತಿ- ಹುಕ್ಕೇರಿ
ಎಸ್.ಟಿ.ಸೋಮಶೇಖರ್- ಯಶವಂತಪುರ
ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
ಬೈರತಿ ಬಸವರಾಜ - ಕೆ ಆರ್ ಪುರಂ
ಮುರುಗೇಶ್ ನಿರಾಣಿ - ಬಿಳಿಗಿ
ಶಿವರಾಂ ಹೆಬ್ಬಾರ್- ಯಲ್ಲಾಪುರ
ಶಶಿಕಲಾ ಜೊಲ್ಲೆ- ನಿಪ್ಪಾಣಿ
ಕೆಸಿ ನಾರಾಯಣ್ ಗೌಡ - ಕೆಆರ್ ಪೇಟೆ
ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ
ಗೋವಿಂದ ಕಾರಜೋಳ-ಮುಧೋಳ
ಮುನಿರತ್ನ- ಆರ್ ಆರ್ ನಗರ, ಬೆಂಗಳೂರು
ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ
ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್, ಬೆಂಗಳೂರು
ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
ಹಾಲಪ್ಪ ಆಚಾರ್ - ಯಲ್ಬುರ್ಗ
ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ
ಪ್ರಭು ಚೌವ್ಹಾಣ್ - ಔರಾದ್
ವಿ ಸೋಮಣ್ಣ - ಗೋವಿಂದ್ ರಾಜನಗರ, ಬೆಂಗಳೂರು
ಆನಂದ್ ಸಿಂಗ್ - ಹೊಸಪೇಟೆ
ಸಿ ಸಿ ಪಾಟೀಲ್ - ನರಗುಂದ
ಬಿ.ಸಿ.ನಾಗೇಶ್ - ತಿಪಟೂರು