ನವದೆಹಲಿ, ಆ 04 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ವಿರುದ್ದ ಕಿಡಿಕಾರಿದ್ದು, "ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಎಂದರೆ, ಭಾಷಣಗಳಲ್ಲಿ ಪ್ರಧಾನಿಯವರ ಕೌಶಲ್ಯ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಎಂದರೆ, ಭಾಷಣಗಳಲ್ಲಿ ಪ್ರಧಾನಿಯವರ ಕೌಶಲ್ಯ. ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಮೋಸ. ಸರ್ಕಾರದ ರೋಜ್ಗರ್ ಮಿಟಾಓ ಯೋಜನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶದ ಯುವಕರಿಗೆ ಉದ್ಯಮಾಧಾರಿಕ ಕೌಶಲ್ಯ ತರಬೇತಿಯನ್ನು ನೀಡುವ ನಿಟ್ಟಲಿನಲ್ಲಿ ಪ್ರಾರಂಭವಾದ ಮೋದಿ ನೇತೃತ್ವದ ಸರ್ಕಾರ ಈ ಯೋಜನೆಗೆ ಕಳೆದ ಆರು ವರ್ಷಗಳಲ್ಲಿ ಕನಿಷ್ಟ ಶೇ.50ರಷ್ಟು ಯುವಕರಿಗೆ ಪ್ರಯೋಜನವಾಗಿಲ್ಲ" ಎಂದು ಸುದ್ದಿ ಸಂಸ್ಥೆಯೊಂದು ಮಾಡಿರುವ ವರದಿಯನ್ನು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.