ಬೆಂಗಳೂರು, ಆ 04 (DaijiworldNews/MS): ಕರ್ನಾಟಕದ ಸಂಪುಟ ರಚನೆ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಈ ಬಾರಿ ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆಯಾಗಿದೆ. ಯಾಕೆಂದರೆ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯ ಗೊಂದಲವೇ ಬೇಡ ಎಂಬ ನಿರ್ಧಾರವನ್ನು ಹೈಕಮಾಂಡ್ ತಳೆದಿದೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸಚಿವ ಸಂಪುಟದಲ್ಲಿ 29 ಸಚಿವರು ಇರುತ್ತಾರೆ. 8 ಲಿಂಗಾಯಿತ, 7 ಒಕ್ಕಲಿಗ, 7 ಒಬಿಸಿ, 3- ಪರಿಶಿಷ್ಠ ಜಾತಿ 1- ಪರಿಶಿಷ್ಠ ಪಂಗಡ 1- ಮಹಿಳೆ 2- ಇತರರು ಸಚಿವರು ಇರುತ್ತಾರೆ. ಇದರಲ್ಲಿ ವಿಜಯೇಂದ್ರ ಹೆಸರು ಇಲ್ಲ ಹಾಗೂ ಡಿಸಿಎಂ ಇಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ಹೊಸ ಸಚಿವ ಸಂಪುಟದಲ್ಲಿ ಅನುಭವವೂ ಇದೆ, ಉತ್ಸಾಹವೂ ಇದೆ .ಬಿಜೆಪಿ ಪಕ್ಷದ ಸಂಘಟನೆಗೆ ಹಿರಿಯರನ್ನು ಬಳಸಿಕೊಳ್ಳುವುದಕ್ಕಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.