ದೇವನಹಳ್ಳಿ, ಆ 04 (DaijiworldNews/PY): "ಪಕ್ಷ ಸಚಿವ ಸ್ಥಾನ ನೀಡಿದಲ್ಲಿ ಕೆಲಸ ಮಾಡುತ್ತೇನೆ. ಇಲ್ಲವಾದಲ್ಲಿ ಕಾರ್ಯಕರ್ತನಾಗಿ ಮುಂದುವರಿದು ಕೆಲಸ ಮಾಡುತ್ತೇನೆ" ಎಂದು ಶಾಸಕ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನ ನೀಡುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಒಂದುವೇಳೆ ಪಕ್ಷ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲವೇ, ಕಾರ್ಯಕರ್ತನಾಗಿ ಮುಂದುವರಿದು ಕೆಲಸ ಮಾಡುತ್ತೇನೆ" ಎಂದಿದ್ದಾರೆ.
"ಈ ಬಗ್ಗೆ ನನಗೆ ಏನೂ ಮಾಹಿತಿಯಿಲ್ಲ. ಯಾರಿಂದಲೂ ನನಗೆ ಕರೆ ಬಂದಿಲ್ಲ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ" ಎಂದು ತಿಳಿಸಿದ್ದಾರೆ.
"ರಾಜಕೀಯದಲ್ಲಿ ಏಳು-ಬೀಳುಗಳು ಸಾಮಾನ್ಯ. ನಾನು ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ ಹಾಗೂ ಅನುಭವಿಸಿದ್ದೇನೆ" ಎಂದಿದ್ದಾರೆ.