ನವದೆಹಲಿ, ಆ. 03 (DaijiworldNews/SM): ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆ ಬಗ್ಗೆ ಆಗಸ್ಟ್ 4ರ ಬುಧವಾರ ಬೆಳಿಗೆ ಅಂತಿಮ ತೀರ್ಮಾನಗೊಳ್ಳಲಿದ್ದು, ಬೆಳಗ್ಗೆ ಶುಭ ಸುದ್ದಿ ತಿಳಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ರಾತ್ರಿ ದೆಹಲಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬುಧವಾರ ಬೆಳಿಗ್ಗೆ ಅಂತಿಮ ನಿರ್ಧಾರವಾಗಲಿದೆ. ಆ ಬಳಿಕ ಸಚಿವರುಗಳ ಅಂತಿಮ ಪಟ್ಟಿಯನ್ನು ರಾಜಭವನಕ್ಕೆ ರವಾನೆಯಾಗಲಿದೆ. ಕ್ಯಾಬಿನೆಟ್ ಗೆ ಎಷ್ಟು ಜನ ಸೇರಳಿದ್ದಾರೆ ಎನ್ನುವುದಕ್ಕೆ ಬುಧವಾರ ಉತ್ತರ ಸಿಗಲಿದೆ. ಇನ್ನು ಡಿಸಿಎಂಗಳ ಬಗ್ಗೆ ಅಂತಿಮಗೊಂಡಿಲ್ಲ. ಬುಧವಾರ ಬೆಳಗ್ಗೆ ಅವುಗಳನ್ನು ಅಂತಿಮಗೊಳಿಸುವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.