ನವದೆಹಲಿ,ಆ.03 (DaijiworldNews/HR): ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಇಡೀ ಭಾರತೀಯ ಒಲಿಂಪಿಕ್ ತಂಡವನ್ನ ವಿಶೇಷ ಆಹ್ವಾನಿತರಾಗಿ ಕೆಂಪು ಕೋಟೆಗೆ ಆಹ್ವಾನಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂಪು ಕೋಟೆಯಲ್ಲಿ ಪ್ರಧಾನಿಯವರು ಎಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದು, ಸಂವಹನ ನಡೆಸುತ್ತಾರೆ. ಭಾರತದ 228 ಸದಸ್ಯರ ತಂಡವು 119 ಆಟಗಾರರನ್ನ ಒಳಗೊಂಡ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದು, ಭಾರತೀಯ ಒಲಿಂಪಿಕ್ ತಂಡದಲ್ಲಿ ಪಿವಿ ಸಿಂಧು, ಮನು ಭಾಕರ್, ಎಂಸಿ ಮೇರಿ ಕೋಮ್, ಮೀರಾಬಾಯಿ ಚಾನು, ವಿನೇಶ್ ಫೋಗಟ್, ದೀಪಿಕಾ ಕುಮಾರ್ ಸೇರಿದ್ದಾರೆ.
ಇನ್ನು ಈ ಒಲಿಂಪಿಕ್ಸ್ನಲ್ಲಿ ಆಡುವ ಭಾರತೀಯ ಆಟಗಾರರಿಗೆ ಮೋದಿ ಒಂದು ಪ್ರಮುಖ ಸಂದೇಶವನ್ನ ನೀಡಿದ್ದು, ಸರಿಯಾದ ಪ್ರತಿಭೆಯನ್ನ ಪ್ರೋತ್ಸಾಹಿಸಿದಾಗ ಭಾರತೀಯ ಆಟಗಾರರು ಅಂತಹ ಉತ್ಸಾಹವನ್ನ ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದ್ದರು.