ಬೆಂಗಳೂರು, ಆ.03 (DaijiworldNews/HR): ಜುಲೈನಲ್ಲಿ 13 ಕೋಟಿ ಭಾರತೀಯರೊಂದಿಗೆ ನೀವು ಲಸಿಕೆ ಹಾಕಿಸಿಕೊಂಡಿದ್ದೀರಂತೆ ನಿಜವೇ? ಎಂದು ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಅವರು ಮೂರು ದಿನಗಳ ಹಿಂದೆ ಲಸಿಕೆ ಹಾಕಿಸಿಕೊಂಡಿರುವುದಾಗಿಯೂ, ಅದೇ ಕಾರಣಕ್ಕೆ ಅವರು ಸಂಸತ್ ಕಲಾಪಕ್ಕೆ ಗೈರಾಗಿರುವುದಾಗಿಯೂ ಮೂಲಗಳ ಮಾಹಿತಿ ಉಲ್ಲೇಖಿಸಿದ್ದು, ಮಾಧ್ಯಮಗಳು ವರದಿ ಮಾಡಿತ್ತು.
ಈ ಕುರಿತು ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಟೀಕಿಸಿದ್ದು, "ಒಂದು ವೇಳೆ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದಾದರೆ, ಇಲ್ಲಿ ವರೆಗೆ ನೀವು ಯಾಕೆ ವಿಷಯ ಬಹಿರಂಗಗೊಳಿಸಿಲ್ಲ. ಲಸಿಕೆ ಪಡೆದಿದ್ದನ್ನು ಹೇಳಿ ನಿಮ್ಮ ಹಿಂಬಾಲಕರಿಗೆ ಪ್ರೇರಣೆ ಆಗಬಹುದಿತ್ತಲ್ಲವೇ?" ಎಂದು ಕೇಳಿದೆ.
ಇನ್ನು "ನಿಮ್ಮ ಹಾಸ್ಯ ನಟನೆಯೊಂದಿಗೆ ನಿಮ್ಮ ಹಿಂಬಾಲಕರನ್ನು ರಂಜಿಸುವುದರಲ್ಲೇ ನೀವು ಸಂತೋಷವಾಗಿದ್ದೀರಾ" ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.