ನವದೆಹಲಿ, ಆ.03 (DaijiworldNews/HR): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಸಿ) 10 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿಸಲಾಗಿದ್ದು, ವಿದ್ಯಾರ್ಥಿಗಳು cbseresults.nic.in. ವೆಬ್ ಸೈಟ್ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.
ಸಾಂಧರ್ಭಿಕ ಚಿತ್ರ
ಸಿಬಿಎಸ್ಇ 10 ತರಗತಿ ಫಲಿತಾಂಶವನ್ನು ಪ್ರಾಯೋಗಿಕ ಪರೀಕ್ಷಾ ಕಾರ್ಯಕ್ಷಮತೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಸಂಯೋಜಿಸಿದ ನಂತರ ಪಡೆದ ಅಂಕಗಳ ಆಧಾರದ ಮೇಲೆ ಘೋಷಿಸಲಾಗಿದೆ..
ಫಲಿತಾಂಶಕ್ಕಾಗಿ cbseresults.nic.in ಅಥವಾ cbse.nic.in ಗೆ ಭೇಟಿ ನೀಡಿ ನಂತರ ನಿಮ್ಮ ಪರೀಕ್ಷಾ ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ವಿವರಗಳನ್ನು ಸಲ್ಲಿಸಿದ ಬಳಿಕ ನಿಮ್ಮ CBSE ಬೋರ್ಡ್ ಫಲಿತಾಂಶಗಳನ್ನುನೋಡಬಹುದು.
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ತಮ್ಮ ಮೊಬೈಲ್ ಮತ್ತು ಇಮೇಲ್ ಐಡಿಗಳಲ್ಲಿ ಎಸ್ಎಂಎಸ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ.