ನವದೆಹಲಿ, ಆ 03 (DaijiworldNews/MS): ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯಗಳ ಮೂಲಕ ರಕ್ತದಕೋಡಿ ಹರಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹಾಗೂ ಭಯೋತ್ಪಾದಕರು ಭೀಕರ ಯೋಜನೆಯನ್ನು ರೂಪಿಸಿದೆ.
ಇದನ್ನು ಕಾರ್ಯರೂಪಕ್ಕೆ ತರಲು, ವಿಶೇಷ ನಿಯಂತ್ರಣ ಕೊಠಡಿ, ಎಂಟು ಹೊಸ ಮಾರ್ಗಗಳ ಮೂಲಕ ಉಗ್ರರನ್ನು ಕಾಶ್ಮೀರದೊಳಕ್ಕೆ ನುಗ್ಗಿಸಲು ಸಂಚು ರೂಪಿಸುತ್ತಿದೆ. ಅದಕ್ಕಾಗಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ, ಉಗ್ರ ಸಂಘಟನೆಗಳಾದ ಲಷ್ಕರ್, ಜೈಶ್, ಅಲ್-ಬದ್ರ್ ಸಂಘಟನೆಗಳ ಜತೆಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿದೆ.
ಪಾಕ್ನ ಐಎಸ್ಐ ಮತ್ತು ಭಯೋತ್ಪಾದಕ ಗುಂಪುಗಳುಗುಪ್ತಚರ ಸಂಸ್ಥೆಗಳು ಗುರುತಿಸಲಾಗಿರುವ ಎಲ್ಒಸಿ ಮೂಲಕ 8 ಹೊಸ ಮಾರ್ಗಗಳ ಮೂಲಕ ಜಮ್ಮ ಮತ್ತು ಕಾಶ್ಮೀರಕ್ಕೆ ನುಸುಳಲು ಯೋಜಿಸುತ್ತಿವೆ.ಇದರ ಜತೆಗೆ ಎಲ್ಒಸಿಯ ಆಚೆ ಇರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 27 ಹೊಸ ಉಗ್ರರಿಗೆ ತರಬೇತಿ ನೀಡುವ ಕೇಂದ್ರಗಳಿವೆ ಎಂದು ಕಂಡುಕೊಂಡಿವೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿರಿಯ ಕಾರ್ಯದರ್ಶಿಗಳ ನಡುವೆ ಸರಣಿ ಸಭೆಗಳು ನಡೆದಿವೆ. ಹೀಗಾಗಿ ಭಾರತೀಯ ಗುಪ್ತಚರ ಪಡೆಯೂ ಜಮ್ಮು ಮತ್ತು ಕಾಶ್ಮೀರ ಗಡಿ ಪ್ರದೇಶಗಳು ಹಾಗೂ ಇತರ ಪ್ರದೇಶದಲ್ಲಿ ದಾಳಿ ನಡೆಸುವ ಸಾಧ್ಯತೆಯ ಎಚ್ಚರಿಕೆಯನ್ನು ನೀಡಿವೆ.