ಪಣಜಿ, ಆ.02 (DaijiworldNews/HR): ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳದಿಂದ ಗೋವಾಕ್ಕೆ ಆಗಮಿಸುವ ಪ್ರಯಾಣಿಕರಿಗೆ ಗೋವಾ ಸರ್ಕಾರ 72 ಗಂಟೆಗಳ ಒಳಗಿನ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಂದ ಗೋವಾ ಪ್ರವೇಶಿಸುವವರಿಗೆ ಎಂಟಿಜನ್ ನೆಗೆಟಿವ್ ತಪಾಸಣಾ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ಇನ್ನು ಈ ನಿಯಮದ ಹಿನ್ನಲೆಯಲ್ಲಿ ಯಾವುದೇ ರಾಜ್ಯಗಳಿಂದ ಗೋವಾಗೆ ಆಗಮಿಸಿದರು ಕೊರೊನಾ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.