ಬೆಂಗಳೂರು, ಆ.02 (DaijiworldNews/HR): ಕರ್ನಾಟಕದಲ್ಲಿ ಸೋಮವಾರ 1285 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇಕಡ 0.96 ರಷ್ಟು ಇದೆ.
ಸಾಂಧರ್ಭಿಕ ಚಿತ್ರ
ಸೋಮವಾರ ರಾಜ್ಯದಲ್ಲಿ 1383 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 25 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ 24,021 ಸಕ್ರಿಯ ಪ್ರಕರಣಗಳಿದ್ದು, ಸೋಮವಾರ 1,33,030 ಪರೀಕ್ಷೆ ನಡೆಸಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಇಂದು 290 ಜನರಿಗೆ ಸೋಂಕು ತಗುಲಿದ್ದು, 168 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.