ನವದೆಹಲಿ, ಆ 02 (DaijiworldNews/PY): ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಐದು ಬಾರಿ ಪ್ಯಾರಾಲಿಂಪಿಯನ್ ಶೂಟರ್ ನರೇಶ್ ಕುಮಾರ್ ಶರ್ಮಾ ಅವರನ್ನು ಹೆಚ್ಚುವರಿ ಆಟಗಾರನನ್ನಾಗಿ ಸೇರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆಗಸ್ಟ್ 24ರಿಂದ ಪ್ರಾರಂಭವಾಗಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ಗೆ ತನ್ನನ್ನು ಆಯ್ಕೆ ಮಾಡದ ಕಾರಣ ಶೂಟರ್ ನರೇಶ್ ಕುಮಾರ್ ಶರ್ಮಾ ಅವರು ನೊಂದು ಸುಪ್ರೀಂ ಮೆಟ್ಟಿಲೇರಿದ್ದರು.
ಪ್ಯಾರಾಲಿಂಪಿಕ್ಸ್ಗೆ ತನ್ನ ಹೆಸರು ಸೇರಿಸುವಂತೆ ಕೋರಿ ನರೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿದೆ.
"ಸುಪ್ರೀಂನ ಆದೇಶಕ್ಕೆ ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ತಂಡದ ಆಯ್ಕೆಯನ್ನು ಸಮಿತಿಯಿಂದ ಮಾಡಬೇಕಾಗಿರುವ ಕಾರಣ ಹೆಚ್ಚು ಪದಕ ಬಂದಲ್ಲಿ ಸಂತೋಷವಾಗುತ್ತದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.