ನವದೆಹಲಿ,ಆ.02 (DaijiworldNews/HR): ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರ ತಳಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ನೂತನ ಅಧ್ಯಯನದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಭಾರತದಲ್ಲಿ ಈವರೆಗೆ ಅನೇಕ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪ್ರಕರಣಗಳು ವರದಿಯಾಗಿದ್ದು, ಲಸಿಕೆಯು ರೂಪಾಂತರಿ ತಳಿ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದೇ ಎಂಬುದು ಸ್ಪಷ್ಟವಾಗಿಲ್ಲವಾಗಿತ್ತು.
ಇನ್ನು ಕೊರೊನಾದ ನೂತನ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಸೋಂಕು ಅತೀ ಕ್ಷಿಪ್ರವಾಗಿ ಹರಡಬಲ್ಲದೇ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಅಂಕಿಅಂಶ ಲಭ್ಯವಾಗಿಲ್ಲ ಎಂದು ಕಳೆದ ತಿಂಗಳು ನೀತಿ ಆಯೋಗದ ಡಾ.ವಿ.ಕೆ.ಪೌಲ್ ಅಭಿಪ್ರಾಯವ್ಯಕ್ತಪಡಿಸಿದ್ದರು.
ಇದೀಗ ಐಸಿಎಂಆರ್ ಅಧ್ಯಯನದಿಂದ ಕೊರೊನಾ ರೂಪಾಂತರಿ ತಳಿಗೆ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ವಿಶ್ವಾಸವನ್ನು ಗಟ್ಟಿಗೊಳಿಸಿದ್ದು, ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ್ದು, ಶೇ.77.8ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.