ನವದೆಹಲಿ, ಆ 02 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರ ಅಮರ್ಜೀತ್ ಸಿನ್ಹಾ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
1983ರ ಬ್ಯಾಚ್ನ ಬಿಹಾರ್ ಕೇಡರ್ ಭಾರತೀಯ ಆಡಳಿತ ಸೇವೆ ಅಧಿಕಾರಿಯಾಗಿದ್ದ ಸಿನ್ಹಾ ಅವರನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರ ಸಲಹೆಗಾರನನ್ನಾಗಿ ನೇಮಿಸಲಾಗಿತ್ತು. ಸಿನ್ಹಾ ಅವರ ರಾಜೀನಾಮೆಗೆ ಇನ್ನೂ ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ.
ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರು ಮಾರ್ಚ್ನಲ್ಲಿ ರಾಜೀನಾಮೆ ನೀಡಿದ್ದರಿಂದಿ ಇದು ಈ ವರ್ಷದ ಎರಡನೇ ರಾಜೀನಾಮೆಯಾಗಿದೆ.
ಸಿನ್ಹಾ ಅವರು ಶಿಕ್ಷಣ ಹಾಗೂ ಪಂಚಾಯತ್ ರಾಜ್ ಸಚಿವಾಲಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತು ಸರ್ವ ಶಿಕ್ಷಾ ಅಭಿಯಾನದಂತಹ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.