ವಯನಾಡ್,ಆ.02 (DaijiworldNews/HR): ನಕ್ಸಲರು ವಯನಾಡಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಕರಪತ್ರ ಹಂಚಿ ಕೇರಳ ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ಸಶಸ್ತ್ರ ನಕ್ಸಲ್ ಗುಂಪೊಂದು ಕಾಲನಿಗೆ ಭೇಟಿ ನೀಡಿರುವುದಾಗಿ ತೊಂಡರ್ನಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಿವಾಸಿಗಳು ತಿಳಿಸಿದ್ದಾರೆ.
ಇನ್ನು ನಕ್ಸಲ್ ತಂಡ ಕಾಲನಿಯ 2 ಮನೆಗಳಿಗೆ ನುಗ್ಗಿ ಘೋಷಣೆ ಕೂಗುತ್ತಾ ಕರಪತ್ರ ಕೊಟ್ಟು ಬಳಿಕ ಈ ಪ್ರದೇಶದಲ್ಲಿ ಪೋಸ್ಟರ್ಗಳನ್ನು ಅಂಟಿಸಿ ಅರಣ್ಯದತ್ತ ಹೋಗಿದ್ದಾರೆ ಎನ್ನಲಾಗಿದೆ.
ಪೋಸ್ಟರ್ಗಳಲ್ಲಿ ಪಿಣರಾಯಿ ವಿಜಯನ್ ಕೇರಳ ಕಂಡ ಅತ್ಯಂತ ನರಭಕ್ಷಕ ಮುಖ್ಯಮಂತ್ರಿ. ಇನ್ನಮುಂದೆ ನಿಮ್ಮನ್ನು ಯಾರೂ ಸಾಮಾಜಿಕ ಫ್ಯಾಸಿಸ್ಟ್ ಅಥವಾ ಕಿಡಿಗೇಡಿ ಮೋದಿ ಎಂದು ಕರೆಯುವುದಿಲ್ಲ. ನೀವು ಮಾನವ ಯಕೃತ್ತನ್ನು ಕಿತ್ತೆಗೆಯುವ ವ್ಯಕ್ತಿ. ಸಾವಿನ ವ್ಯಾಪಾರಿ ಎಂದು ಬರೆಯಲಾಗಿದೆ.