ಬೆಂಗಳೂರು, ಅ 01 (DaijiworldNews/MS): ಬಿಜೆಪಿ ಪಕ್ಷದಲ್ಲಿ ವಲಸಿಗರಿಗೆ ಕಪ್ಪು, ಮೂಲದವರಿಗೆ ಚಿಪ್ಪು ಎಂಬಂತಾಗಿದ್ದು ಜನತಾಪರಿವಾರ vs ಸಂಘಪರಿವಾರ ಬಣಗಳ ಗುದ್ದಾಟ ಜೋರಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
ಈ ಬಗ್ಗೆ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಬಣಗಳಾದ ಜನತಾಪರಿವಾರ - ಸಂಘಪರಿವಾರ ಬಣಗಳ ಗುದ್ದಾಟ ಜೋರಾಗಿದ್ದು ಜನತಾ ಪರಿವಾರದವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋತರೂ ಮತ್ತೊಬ್ಬ ಡಿಸಿಎಂ ಲಕ್ಶ್ಮಣ ಸವದಿ ಮತ್ತೊಬ್ಬ ಡಿಸಿಎಂ ಗೋವಿಂದ್ ಕಾರಜೋಳ ವಲಸಿಗರಿಗೆ ಉನ್ನತ ಹುದ್ದೆ ಸಿಗುತ್ತಿರುವುದು ಸಂಘಪರಿವಾರದವರ ಕಣ್ಣು ಕೆಂಪಾಗಿದೆ. ವಲಸಿಗರಿಗೆ ಕಪ್ಪು, ಮೂಲದವರಿಗೆ ಚಿಪ್ಪು ಎಂಬಂತಾಗಿದೆ ಎಂದು ಬಿಜೆಪಿಯನ್ನು ಮಾತಿನಲ್ಲಿ ಕುಟುಕಿದೆ.
ಇದಲ್ಲದೆ ಇನ್ನೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಕಳೆದ ಭಾರಿಯ ಅಧಿಕಾರಾವಧಿಯಲ್ಲಿ ಪ್ರತಿನಿತ್ಯ ಕಾಟ ಕೊಟ್ಟು ಮೂರೇ ವರ್ಷಕ್ಕೆ ಸಿಎಂ ಹುದ್ದೆಯಿಂದ ಇಳಿಸಿ ಕೆಜೆಪಿ ಸ್ಥಾಪಿಸುವಂತೆ ಮಾಡಿದರು. ಈಗ ಎರಡೇ ವರ್ಷಕ್ಕೆ ಸಿಎಂ ಹುದ್ದೆ ಕಸಿದರು, ಬಿಎಸ್ ವೈ ರಾಜೀನಾಮೆಗೆ ಹಾಗೂ ಅವರ ಕಣ್ಣೀರಿಗೆ ಕಾರಣವೇನು ಹೇಳುವುದೇ ಬಿಜೆಪಿ? ಎಂದು ಪ್ರಶ್ನಿಸಿದೆ. ವಾಜಪೇಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಹಿರಿಯ ನಾಯಕ ಜೆಟ್ಮಲಾನಿಯವರನ್ನ ತನ್ನ ಪ್ರಧಾನಿ ಹುದ್ದೆಯ ಬಳಸಿ ಬಿಸಾಡಿದ್ದು, ಮೀರ್ ಸಾದಿಕ್ ಮೋದಿ, ಹಿರಿಯರನ್ನು ಒದ್ದೋಡಿಸುವುದೇ ಬಿಜೆಪಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದೆ.