ಕಾರವಾರ, ಆ.02 (DaijiworldNews/HR): ಡಿ.ವಿ. ಸದಾನಂದಗೌಡ ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಯಾವುದೋ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಲುಕಿದ್ದಾರೆ. ಅದಕ್ಕಾಗಿಯೇ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದಾನಂದಗೌಡ ಮತ್ತು ರೇಣುಕಾಚಾರ್ಯ ಅವರು ಯಾವುದೋ ಸೆಕ್ಸ್ ಸ್ಕ್ಯಾಂಡಲ್, ಭ್ರಷ್ಟಾಚಾರ ಅಥವಾ ಯಾವುದೇ ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾಗಿಯೇ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ವಿಡಿಯೋಗಳಲ್ಲಿ ಗ್ರಾಫಿಕ್ಸ್ ಮಾಡುವುದಾದರೆ ರೇಣುಕಾಚಾರ್, ಸದಾನಂದಗೌಡರದ್ದೇ ಯಾಕೆ ಮಾಡಬೇಕು? ಬೇರೆಯವರನ್ನು ಯಾಕೆ ಮಾಡಲ್ಲ? ಇವರದ್ದು ಕಳ್ಳರ ಮನಸ್ಸು ಹುಳ್ಳುಳುಗೆ ಎಂಬಂತೆ. ಕಳ್ಳ ಹೆಗಲುಮುಟ್ಟಿ ನೋಡಿಕೊಂಡಂತೆ ಇವರದ್ದು" ಎಂದು ಟೀಕಿಸಿದ್ದಾರೆ.
ಇನ್ನು ಬಿಜೆಪಿ ಪಕ್ಷದವರಂತಹ ಸಂಸ್ಕೃತಿ ಇಲ್ಲದ ಜನ ಬೇರೆ ಯಾರೂ ಇಲ್ಲ. ಕಳ್ಳರ ಮನಸ್ಸು ಹುಳ್ಳುಳುಗೆ ಎಂಬಂತೆ. ಕಳ್ಳ ಹೆಗಲುಮುಟ್ಟಿ ನೋಡಿಕೊಳ್ಳುವವರು" ಎಂದು ಹೇಳಿದ್ದಾರೆ.