ನವದೆಹಲಿ, ಅ 01 (DaijiworldNews/MS): ಕೇಂದ್ರ ಆಯುಷ್ ಸಚಿವಾಲಯಯೂ ಯು.ಕೆ ಯ ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಕೊರೊನಾ ಸೋಂಕು ನಿಯಂತ್ರಣಕ್ಕೆ ಅಶ್ವಗಂಧ ಸಹಕಾರಿಯಾಗಬಲ್ಲದೇ ಎಂಬ ಕುರಿತು ಜಂಟಿಯಾಗಿ ಅಧ್ಯಯನ ನಡೆಸಲಿದೆ.
ಈಗಾಗಲೇ ಆಯುಷ್ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಅಖಿ ಭಾರತ ಆಯುರ್ವೇದ ಸಂಸ್ಥೆ(ಎಐಐಎ) ಮತ್ತು ಎಲ್ಎಸ್ಎಚ್ಟಿಎಂ ನಡುವೆ ಈ ಕುರಿತು ಒಪ್ಪಂದ ನಡೆದಿದೆ. ಅದರಂತೆ, ಯು.ಕೆ.ಯ ಮೂರು ನಗರಗಳಾದ ಲೈಸೆಸ್ಟರ್, ಬರ್ಮಿಂಗ್ಹ್ಯಾಂ ಮತ್ತು ಲಂಡನ್ನಲ್ಲಿ ಸುಮಾರು 2 ಸಾವಿರ ಮಂದಿಯ ಮೇಲೆ ಅಶ್ವಗಂಧದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಭಾರತದಲ್ಲಿ ಚಳಿಗಾಲದ ಚೆರ್ರಿ' ಎಂದು ಸಾಮಾನ್ಯವಾಗಿ ಕರೆಯಲ್ಪಡುವ 'ಅಶ್ವಗಂಧ' (ವಿಥಾನಿಯಾ ಸೊಮ್ನಿಫೆರಾ) ಸಾಂಪ್ರದಾಯಿಕ ಭಾರತೀಯ ಮೂಲಿಕೆಯಾಗಿದ್ದು ಅದು ಶಕ್ತಿಯನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಬಲಿಷ್ಠಗೊಳಿಸುವಂಥ ಸಾಂಪ್ರದಾಯಿಕ ಗಿಡಮೂಲಿಕೆಯಾಗಿದೆ.
ದೀರ್ಘಕಾಲಿಕ ಕೋವಿಡ್ನಿಂದ ಬಳಲುತ್ತಿರುವ ಮೇಲೆ 'ಅಶ್ವಗಂಧ'ದ ಧನಾತ್ಮಕ ಪರಿಣಾಮಗಳನ್ನು ಗಮನಿಸಲಾಗಿದೆ, ಆದರೆ ಇದರ ಪರಿಣಾಮಕಾರಿ ಚಿಕಿತ್ಸೆ ಅಥವಾ ನಿರ್ವಹಣೆಯ ಬಗ್ಗೆ ಯಾವುದೇ ಪುರಾವೆಗಳಿಲ್ಲ.
ಪ್ರಾಯೋಗಿಕ ಪರೀಕ್ಷೆ ಭಾಗವಹಿಸುವವರು ದಿನಕ್ಕೆ ಎರಡು ಬಾರಿ 500 ಮಿಗ್ರಾಂ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಶಸ್ವಿ ಪ್ರಯೋಗದ ಬಳಿಕ ಅಶ್ವಗಂಧವು ಕೊವೀಡ್ ಸೋಂಕನ್ನು ತಡೆಗಟ್ಟವ ವಿಶ್ವಾದ್ಯಂತ ವೈಜ್ಞಾನಿಕ ಸಮುದಾಯದಿಂದ ಔಷಧೀಯ ಚಿಕಿತ್ಸೆಯಾಗಿ ಗುರುತಿಸಲ್ಪಡುತ್ತದೆ " ಎಂದು ಸಚಿವಾಲಯ ಹೇಳಿದೆ.