ನವೆದೆಹಲಿ,ಆ.01 (DaijiworldNews/HR): ಸರ್ಕಾರದ ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ನ ಹೊರಗೆ ಘೋಷಿಸುತ್ತಿದ್ದಾರೆ ಎಂದು ಆರ್ಎಸ್ಪಿ ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಪ್ರೇಮಚಂದ್ರನ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದು, ಪ್ರಧಾನಿ ಮೋದಿಯವರ ನಡವಳಿಕೆ ಸಂಸತ್ಗೆ ಅಗೌರವ ತರುವಂತಿದ್ದು, ಅವರ ನಡವಳಿಕೆ ದಶಕಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಸದೀಯ ಸಂಪ್ರದಾಯಗಳಿಗೆ ಹೊರತಾದದ್ದು ಎಂಬ ರೂಲಿಂಗ್ ನೀಡಬೇಕು" ಎಂದು ದೂರಿನಲ್ಲಿ ಕೋರಿದ್ದಾರೆ.
ಇನ್ನು ಸಂಸತ್ನ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಅವರು ಅಖಿಲ ಭಾರತ ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ ಮೀಸಲಾತಿ ನಿಗದಿ ಹಾಗೂ ಎಂಜಿನಿಯರಿಂಗ್ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಕುರಿತು ಘೋಷಣೆ ಮಾಡಿದ್ದಾರೆ" ಎಂದು ದೂರಿನಲ್ಲಿ ವಿವರಿಸಿದ್ದಾರೆ.