ಬೆಂಗಳೂರು, ಆ 01 (DaijiworldNews/PY): "ಇಂದು ಅಥವಾ ನಾಳೆ ಸಚಿವ ಸಂಪುಟ ರಚನೆಗೆ ಹೈಕಮಾಂಡ್ನಿಂದ ಸೂಚನೆ ಬರುವ ಸಾಧ್ಯತೆ ಇದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾ ಆಗಿರುವ ಹಾನಿ ನಷ್ಟದ ಬಗ್ಗೆ ಹಣಕಾಸಿನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತವಾದ ಪರಿಹಾರ ಕ್ರಮ ತೆಗೆದುಕೊಳ್ಳಲು ಅಂದಾಜಿಸಲಾಗುತ್ತಿದೆ. ಇಂದು ಅಧಿಕಾರಿಗಳ ಸಭೆನಡೆಸಿದ ಬಳಿಕ ಮಾಹಿತಿ ನೀಡುತ್ತೇನೆ" ಎಂದಿದ್ದಾರೆ.
ಭಾನುವಾರ ಬೆಳಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪು ರಚನೆ ಬಗ್ಗೆ ಚರ್ಚಿಸಲು ಬಂದಿದ್ದರೇ?. ಕಾವೇರಿ ನಿವಾಸ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸಿಎಂ ಬೊಮ್ಮಾಯಿ ಅವರ ಆರ್ಟಿ ನಗರ ನಿವಾಸಕ್ಕೆ ಹಿರಿಯ ಶಾಸಕರ ದಂಡು ಆಗಮಿಸುತ್ತಿದ್ದು, ನಿಮ್ಮನ್ನೇ ನಂಬಿಕೊಂಡಿದ್ದೇವೆ. ಮಂತ್ರಿಮಂಡಲದಲ್ಲಿ ನಮಗೆ ಒಂದು ಅವಕಾಶ ನೀಡಿ. ನಮ್ಮ ಕೈ ಬಿಡಬೇಡಿ ಎಂದು ಹೇಳುತ್ತಿರುವುದು ಸಾಮಾನ್ಯವಾಗಿದೆ.