ಚೆನ್ನೈ, ಆ.01 (DaijiworldNews/HR): ಕೇರಳದಿಂದ ತಮಿಳುನಾಡಿಗೆ ಬರುವವರಿಗೆ ಆಗಸ್ಟ್ 5ರಿಂದ ಆರ್ಟಿ–ಪಿಸಿಆರ್ ವರದಿ ಕಡ್ಡಾಯ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು,ಕೇರಳದಿಂದ ತಮಿಳುನಾಡಿಗೆ ಬರುವವರಿಗೆ ಆರ್ಟಿ–ಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ" ಎಂದರು.
ಇನ್ನು ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಈಗಾಗಲೇ ಕಳುಹಿಸಿದ್ದು, ಜತೆಗೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ವಾರಾಂತ್ಯದ ಕರ್ಪ್ಯೂ ಜಾರಿಗೊಳಿಸಿದೆ.
ಶನಿವಾರ ಕೇರಳದಲ್ಲಿ 20,600 ಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿ ಆಗಿವೆ.