ನವದೆಹಲಿ, ಆ 01 (DaijiworldNews/PY): ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜುಲೈ ತಿಂಗಳು ಮುಗಿದು ಹೋಗಿದೆ. ಆದರೆ, ಇನ್ನೂ ಕೊರೊನಾ ಲಸಿಕೆಯ ಕೊರತೆ ನೀಗಿಲ್ಲ" ಎಂದಿದ್ದಾರೆ. ಟ್ವೀಟ್ನಲ್ಲಿ ಲಸಿಕೆಯ ಕೊರತೆ ಬಗ್ಗೆ ವಿಸ್ತೃತ ವರದಿಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕೇಂದ್ರದ ಸರ್ಕಾರದ ಮಾಜಿ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈ ಹಿಂದೆ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಟಿಯಲ್ಲಿ, "ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ಅಂತ್ಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೊರೊನಾ ಲಸಿಕೆಗಳನ್ನು ಪೂರೈಸಲಾಗುತ್ತದೆ" ಎಂದು ಭರವಸೆ ನೀಡಿದ್ದರು.
ಕೇಂದ್ರ ಸರ್ಕಾರವು ಈ ಭರವಸೆ ಈಡೇರದ ಹಿನ್ನೆಲೆ ದೇಶಾದ್ಯಂತ ಕೊರೊನಾ ಲಸಿಕೆಗಳ ಕೊರತೆ ಕಂಡು ಬಂದ ಕಾರಣ ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.