ಶ್ರೀನಗರ, ಆ.01 (DaijiworldNews/HR): ಜಮ್ಮು ಕಾಶ್ಮೀರದ ಡೊಮಾನ ಪ್ರದೇಶದಲ್ಲಿ ಒಂದು ಗಂಟೆಯ ಅವಧಿಯೊಳಗೆ ಮೂರು ಡ್ರೋನ್ಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಸ್ಥಳೀಯ ಯುವಕನೋರ್ವ ಡ್ರೋನ್ ಹಾರಾಟ ನಡೆಸುತ್ತಿರುವ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಬೆಳಕು ಸೂಸುತ್ತಾ ಸಾಗಿದ ಡ್ರೋನ್ ಮೂರು ನಿಮಿಷಗಳ ಬಳಿಕ ಕಣ್ಮರೆಯಾಗಿದೆ ಎಂದು ವರದಿಯಾಗಿದೆ.
ಇನ್ನು ಮೊದಲ ಎರಡು ಡ್ರೋನ್ ಗಳು ಸಾಂಬಾ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ರಾತ್ರಿ 8-9 ಗಂಟೆಯ ಸಮಯದಲ್ಲಿ ಈ ಎರಡು ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ. ಮತ್ತೊಂದು ಮಾನವ ರಹಿತ ಹಾರಾಡುವ ವಾಹನ 9.50ರ ಸಮಯದಲ್ಲಿ ಜಮ್ಮು ಜಿಲ್ಲೆಯ ಡೊಮಾನ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.