ನವದೆಹಲಿ, ಆ 01 (DaijiworldNews/PY): ಸೆಪ್ಟೆಂಬರ್ ವೇಳೆಗೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಭಾರತದಲ್ಲಿ ಸಂಪೂರ್ಣ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಸೆಪ್ಟೆಂಬರ್ ತಿಂಗಳಿನಲ್ಲಿ ಲಸಿಕೆ ಸಂಪೂರ್ಣವಾಗಿ ಬಳಕೆಗೆ ಬರುವ ನಿರೀಕ್ಷೆ ಇದೆ. ಭಾರತದ ಅತೀ ದೊಡ್ಡ ಲಸಿಕೆ ಉತ್ಪಾದಕ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಗ್ಲಾಂಡ್ ಫಾರ್ಮಾ ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯ ಬಯೋಟೆಕ್ನಂತ ಕಂಪೆನಿಗಳ ಜೊತೆ ಭಾರತ ಸ್ಪುಟ್ನಿಕ್ ವಿ ಲಸಿಕೆಯ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ" ಎಂದು ಆರ್ಡಿಐಎಫ್ ಹೇಳಿದೆ.
"ಭಾರತದಲ್ಲಿ 2ನೇ ಬ್ಯಾಚ್ ಲಸಿಕೆ ತಯಾರಿಕೆಯಲ್ಲಿ ವಿಳಂಬದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆ, ಈ ರೀತಿಯಾಗಿ ಯಾವುದೇ ವಿಳಂಬ ಉಂಟಾಗಿಲ್ಲ. ಲಸಿಕೆಯು ಕಂಪೆನಿಯ ಗುರಿಯಂತೆ ತಯಾರಾಗುತ್ತಿದೆ" ಎಂದಿದೆ.