ಪುಣೆ, ಆ.01 (DaijiworldNews/HR): ಮೊಟ್ಟ ಮೊದಲ ಝೀಕಾ ವೈರಸ್ ಪ್ರಕರಣ ಮಹಾರಾಷ್ಟ್ರದ ಜಿಲ್ಲೆಯ ಬೆಲ್ಸರ್ ಗ್ರಾಮದಲ್ಲಿ ಶನಿವಾರ ಪತ್ತೆಯಾಗಿದ್ದು, ಕೇರಳ ಬಳಿಕ ಝೀಕಾ ವೈರಸ್ ಪತ್ತೆಯಾದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.ಕಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಪ್ರದೀಪ್ ಅವಟೆ, "ಆರೋಗ್ಯ ಇಲಾಖೆ ತಜ್ಞರ ತಂಡ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, "ಬೆಲ್ಸರ್ ಗ್ರಾಮದ ಝೀಕಾ ವೈರಸ್ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ಯಾವುದೇ ರೋಗಲಕ್ಷಣ ಇಲ್ಲ. ರಾಜ್ಯದ ಕ್ಷಿಪ್ರಸ್ಪಂದನೆ ತಂಡ ಕೂಡಾ ಗ್ರಾಮದಲ್ಲಿ ತಪಾಸಣೆ ನಡೆಸಿದ್ದು, ಸ್ಥಳೀಯ ಆಡಳಿತದ ಜತೆ ಹಾಗೂ ಆರೋಗ್ಯ ಸಿಬ್ಬಂದಿ ಜತೆ ಸಭೆ ನಡೆಸಿ, ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ಝೀಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಈಡಿಸ್ ಪ್ರಬೇಧದ ಸೊಳ್ಳೆಗಳಿಂದ ಪ್ರಮುಖವಾಗಿ ಹರಡುತ್ತದೆ ಎನ್ನಲಾಗಿದೆ.