ಮೈಸೂರು,ಜು.31 (DaijiworkldNews/HR): ಪಕ್ಷದ ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಬಿಜೆಪಿಯ ಸಂಸ್ಕೃತಿಯಾಗಿದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಮಾತನಾದಿದ ಅವರು, "ಬಿ.ಎಸ್.ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕಿತ್ತು. ಆದರೆ ಅವರು ಹಿರಿಯರೆಂಬ ಕಾರಣಕ್ಕೆ ತೆಗೆದಿರುವುದು ಸರಿಯಲ್ಲ. ಲಾಲ್ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕರನ್ನು ಮಕ್ಕಳು ತಮ್ಮ ಮನೆಯಿಂದ ಅಪ್ಪ, ಅಮ್ಮರನ್ನು ಹೊರಗಟ್ಟಿದಂತೆ ಕಸದ ಬುಟ್ಟಿಗೆ ಬಿಜೆಪಿ ಹಾಕಿದೆ" ಎಂದಿದ್ದಾರೆ.
"ಬಿಜೆಪಿ ತನ್ನ ಲಾಭಕ್ಕಾಗಿ ಜಾತಿ ಸಮುದಾಯಗಳನ್ನು ಉಪಯೋಗಿಸಿಕೊಂಡು ನಂತರ ಬೀಸಾಡುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್ಗೆ ಉಂಟಾಗುವ ಲಾಭ, ನಷ್ಟದ ಕುರಿತು ಚಿಂತಿಸುವುದಿಲ್ಲ. ಆದರೆ ಅವರು ಕಣ್ಣೀರು ಹಾಕಿದ್ದು ಏಕೆ ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು ಪ್ರವಾಹದ ಸಂತ್ರಸ್ತರ ನೆರವಿಗೆ ಬಾರದ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.