ಪುಲ್ವಾಮಾ,ಜು.31 (DaijiworkldNews/HR): ಭದ್ರತಾ ಪಡೆಗಳು ಇಂದು ನಡೆಸಿದ ಎನ್ಕೌಂಟರ್ನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನ ಸೋದರಳಿಯ ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಲಂಬೂ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಎನ್ಕೌಂಟರ್ನಲ್ಲಿ ಮೃತಪಟ್ಟಿರುವ ಇಬ್ಬರು ಉಗ್ರರ ಪೈಕಿ ಒಬ್ಬನನ್ನು ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಅಲಿಯಾಸ್ ಅದ್ನಾನ್ ಅಲಿಯಾಸ್ ಲಂಬೂ ಎಂದು ಗುರುತಿಸಲಾಗಿದೆ.
ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ನಮೀಬಿಯಾನ್, ಮಾರ್ಸರ್ ಅರಣ್ಯ ಪ್ರದೇಶ ಮತ್ತು ದಾಚಿಗಾಂನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಶೋಧ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕಾರ್ಯಾಚರಣೆಯು ಎನ್ಕೌಂಟರ್ನಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಲಂಬೂ 2019 ರಲ್ಲಿ 40 ಸಿಆರ್ಪಿಎಫ್ ಸಿಬ್ಬಂದಿಯ ಜೀವ ಬಲಿ ಪಡೆದಿದ್ದ ಪುಲ್ವಾಮಾ ದಾಳಿಯ ಹಿಂದೆ ಕೂಡ ಕೈವಾಡ ಇತ್ತು ಎನ್ನಲಾಗಿದೆ.
ಇನ್ನು ಲಂಬೂ ಮಸೂದ್ ಜೆಇಎಂನ ಮುಖ್ಯಸ್ಥ ಅಜರ್ ಕುಟುಂಬದವನಾಗಿದ್ದು, ಪುಲ್ವಾಮ ದಾಳಿಯಲ್ಲಿ ಐಇಡಿ ಮೂಲಕ ಸ್ವತಃ ತನ್ನನ್ನೇ ಸ್ಫೋಟಿಸಿಕೊಂಡ ಆದಿಲ್ ಧರ್ಗೆ ತರಬೇತಿ ನೀಡಿದವರಲ್ಲಿ ಲಂಬೂ ಕೂಡ ಒಬ್ಬನಾಗಿದ್ದು, ಪುಲ್ವಾಮ ದಾಳಿಗೆ ಸಂಬಂಧಿಸಿದ ಎನ್ಐಎ ಚಾರ್ಜ್ಶೀಟ್ನಲ್ಲಿ ಆತನ ಹೆಸರಿತ್ತು ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.